ನವದೆಹಲಿ: ವಾಯು ಮಾಲಿನ್ಯವು ದೆಹಲಿಯಲ್ಲಿ ಮಿತಿ ಮಿರುತ್ತಿದ್ದ ಹಿನ್ನೆಲೆ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯಲಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ಸಾಮಾನ್ಯವಾಗಿದ್ದು, ಪ್ರಸ್ತುತ ಮಿತಿ ಮೀರಿದೆ. ಈ ಹಿನ್ನೆಲೆ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದ್ದು, ಮುಖ್ಯ ನ್ಯಾಯಮೂರ್ತಿ ಎನ್‍ವಿ ರಮಣ ನೇತೃತ್ವದ ಪೀಠದಲ್ಲಿ ವಿಚಾರಣೆ ಮಾಡಲಾಗುತ್ತದೆ. ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ, ಮಾಲಿನ್ಯ ನಿಯಂತ್ರಣ ಸಂಬಂಧ ಕೇಂದ್ರ ಸರ್ಕಾರದಿಂದ ಅಫಿಡೆವಿಟ್ ಸಲ್ಲಿಕೆ ಕುರಿತು ಇಲ್ಲಿ ವಿಚಾರಣೆಯನ್ನು ಮಾಡಲಾಗುತ್ತೆ.
Advertisement
Advertisement
ದೆಹಲಿ ವಾಯುಮಾಲಿನ್ಯ ವಿಚಾರವಾಗಿ ತುರ್ತು ಮೀಟಿಂಗ್ ಕರೆಯುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದ್ದು, ಹರಿಯಾಣ, ದೆಹಲಿ, ಪಂಜಾಬ್ ಸೇರಿ ಎಲ್ಲ ರಾಜ್ಯಗಳನ್ನು ಸಭೆಗೆ ಕರೆಯಲು ಸೂಚನೆ ನೀಡಲಾಗಿದೆ. ದೀರ್ಘಾವಧಿ, ಅಲ್ಪಾವಧಿಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಂಗಳವಾರ ವರದಿ ನೀಡುವಂತೆ ರಾಜ್ಯಗಳಿಗೆ ಸುಪ್ರೀಂ ಸೂಚನೆ ನೀಡಿದೆ. ಇದನ್ನೂ ಓದಿ: ಕಳ್ಳತನ ಮಾಡುವುದಕ್ಕೂ ಮುನ್ನ ದೇವರ ಪಾದ ಮುಟ್ಟಿ ನಮಸ್ಕರಿಸಿದ!- ವೀಡಿಯೋ ವೈರಲ್
Advertisement
Advertisement
ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಿ ಎಂದು ಸುಪ್ರೀಂ ತಿಳಿಸಿದ್ದು, ಕೇವಲ ರೈತರು ಗೋಧಿ ಕಡ್ಡಿ ಸುಡುವುದು ಮಾತ್ರ ಈ ಸಮಸ್ಯೆಗೆ ಕಾರಣವಲ್ಲ. ಕೈಗಾರಿಕೆಗಳಿಂದ ಹೊರಬೀಳುವ ಹೊಗೆ, ಪಟಾಕಿ, ಕಟ್ಟಡ ನಿರ್ಮಾಣ ಧೂಳು ಮುಂತಾದವು ಈ ಸಮಸ್ಯೆಗೆ ಕಾರಣ ಎಂದು ತಿಳಿಸಿದೆ. ಈ ಬಗ್ಗೆ ಯಾವ ನಿಯಂತ್ರಣ ಕ್ರಮಗಳು ಕೈಗೊಳ್ಳಲಾಗಿದೆ ಎಂದು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಯನ್ನು ಕೇಳುತ್ತಿದೆ.
ಕೇಂದ್ರ ಸರ್ಕಾರ ಅಫಿಡೆವಿಟ್ ನಲ್ಲಿ, ಡಿಸೇಲ್ ವಾಹನಗಳ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು. ಪಾರ್ಕಿಂಗ್ ಶುಲ್ಕ 3-4 ಪಟ್ಟು ಹೆಚ್ಚಳ ಮಾಡುವುದು. ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಸಮಯ ಹೆಚ್ಚಿಸುವುದು ಎಂದು ಹಲವು ಸಲಹೆಗಳನ್ನು ನೀಡಿದೆ. ಅದು ಅಲ್ಲದೇ ವಾಹನ ದಟ್ಟಣೆಯನ್ನು ತಡೆಯಲು ಸಮ ಬೆಸ ಜಾರಿ ಹಾಗೂ ದೆಹಲಿಗೆ ಟ್ರಕ್ ಗಳ ಪ್ರವೇಶ ನಿಷೇಧ ಹೇರುವ ಬಗ್ಗೆಯೂ ಸಲಹೆ ನೀಡಿದೆ. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ