– ದೆಹಲಿ ದೇಶದ ರಾಜಧಾನಿಯಾಗಿ ಮುಂದುವರಿಯಬೇಕಾ?
– ಚರ್ಚೆಗೆ ಗ್ರಾಸವಾಯ್ತು ಶಶಿ ತರೂರ್ ಟ್ವೀಟ್
ನವದೆಹಲಿ: ದೆಹಲಿ ವಾಯುಮಾಲಿನ್ಯ (Delhi Air Pollution) ಸದ್ಯಕ್ಕೆ ನಿಯಂತ್ರಣಕ್ಕೆ ಬರುವಂತೆ ಕಾಣ್ತಿಲ್ಲ. ಕಳೆದ 24 ಗಂಟೆಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 488 ತಲುಪಿದೆ. ಸತತ 7ನೇ ದಿನವೂ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಇದೆ. ಬಾಂಗ್ಲಾದೇಶದ ಢಾಕಾ, ಪಾಕಿಸ್ತಾನದ (Pakistan) ಲಾಹೋರ್ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿವೆ.
Advertisement
ಇಂತಹ ಪರಿಸ್ಥಿತಿಯಲಿ ದೆಹಲಿ ಇನ್ನೂ ದೇಶದ ರಾಜಧಾನಿಯಾಗಿ ಮುಂದುವರೆಯಬೇಕಾ? ಎಂದು ಸಂಸದ ಶಶಿ ತರೂರ್ (Shashi Tharoor) ಪ್ರಶ್ನೆ ಮಾಡಿದ್ದಾರೆ. ನವೆಂಬರ್‌ನಿಂದ ಜನವರಿವರೆಗೂ ಈ ನಗರ ವಾಸಕ್ಕೆ ಯೋಗ್ಯವಲ್ಲ.. ಉಳಿದ ಅವಧಿಯಲ್ಲೂ ಉತ್ತಮ ಜೀವನ ಸಾಧಿಸಲು ಸಾಧ್ಯವಾಗಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.. ಇಂತಹ ಸನ್ನಿವೇಶದಲ್ಲಿ ದೆಹಲಿ ರಾಜಧಾನಿಯಾಗಿ ಉಳೀಬೇಕಾ? ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ಇತ್ತ ಮಾಲಿನ್ಯ ಹೆಚ್ಚಳದ ಬಗ್ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ವೇಳೆ ವರ್ಚುವಲ್ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಿಜೆಐ ಸಂಜೀವ್ ಖನ್ನಾ ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಬಿಲ್ ಬಾಕಿ, ದೆಹಲಿಯ ಹಿಮಾಚಲ ಭವನ ಮುಟ್ಟುಗೋಲು ಹಾಕಲು ಹೈಕೋರ್ಟ್ ಆದೇಶ
Advertisement
ಇನ್ನೂ, ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಸುರಿಸೋದೊಂದೇ ಮಾರ್ಗ.. ಅದಕ್ಕೆ ಅನುಮತಿ ಕೊಡಿ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ದೆಹಲಿ ಮಾತ್ರವಲ್ಲ.. ಉತ್ತರ ಭಾರತದಲ್ಲಿ ಮಂಜು ಆವರಿಸಿದೆ. ನೋಯ್ಡಾ ಬಳಿ ಸರಣಿ ಅಪಘಾತ ನಡೆದಿದೆ. ಹತ್ತಾರು ಕಾರು ಡಿಕ್ಕಿಯಾಗಿ, ಇಬ್ಬರು ಸಾವನ್ನಪ್ಪಿದ್ದಾರೆ. ಆಗ್ರಾದಲ್ಲಿ ತಾಜ್‌ಮಹಲ್ ಕೂಡ ಗೋಚರ ಆಗ್ತಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬುಧವಾರ ಮಹಾ ಚುನಾವಣೆ – ಎಂವಿಎ ವರ್ಸಸ್ ಮಹಾಯುತಿ ಭರ್ಜರಿ ಕದನ