ನವದೆಹಲಿ: ನಗರದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ (AIIMS) ಕಂಪ್ಯೂಟರ್ ಸಿಸ್ಟಮ್ ಮೇಲೆ ಇತ್ತೀಚೆಗೆ ಸೈಬರ್ ದಾಳಿ (Cyber Attack) ನಡೆದಿದ್ದು, ಈ ದಾಳಿಯ ಮೂಲ ಚೀನಾವಾಗಿದೆ (China) ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿದೆ.
ವರದಿಗಳ ಪ್ರಕಾರ 100 ಸರ್ವರ್ಗಳಲ್ಲಿ (40 ಭೌತಿಕ ಹಾಗೂ 60 ವರ್ಚುವಲ್) 5 ಭೌತಿಕ ಸರ್ವರ್ಗಳನ್ನು ಹ್ಯಾಕ್ ಮಾಡುವಲ್ಲಿ ಅಪರಾಧಿಗಳು ಯಶಸ್ವಿಯಾಗಿದ್ದಾರೆ. ಆದರೆ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡಿರುವುದರಿಂದ ದೊಡ್ಡ ಹಾನಿಯನ್ನು ತಪ್ಪಿಸಲಾಗಿದೆ. ಇದೀಗ ಲಕ್ಷಗಟ್ಟಲೆ ರೋಗಿಗಳ ವಿವರಗಳು ಸುರಕ್ಷಿತವಾಗಿದೆ ಎಂದು ವರದಿಯಾಗಿದೆ.
Advertisement
Advertisement
ನವೆಂಬರ್ 23 ರಂದು ಮೊದಲ ಬಾರಿ ಏಮ್ಸ್ ಆಸ್ಪತ್ರೆಯ ಸರ್ವರ್ 9 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದು ಹ್ಯಾಕರ್ಗಳ (Hacker) ದಾಳಿಯಿಂದಾಗಿರುವುದಾಗಿ ಏಮ್ಸ್ ತಿಳಿಸಿತ್ತು. ಸುಮಾರು 3-4 ಕೋಟಿ ರೋಗಿಗಳ ವಿವರ ಸೋರಿಕೆಯಾಗಿರುವ ಭೀತಿ ಉಂಟಾಗಿದ್ದು, ಬಳಿಕ ಹ್ಯಾಕರ್ಗಳು ಏಮ್ಸ್ನಿಂದ ಸುಮಾರು 200 ಕೋಟಿ ರೂ. ಮೌಲ್ಯದ ಕ್ರಿಪ್ಟೋಕರೆನ್ಸಿ ನೀಡುವಂತೆ ಬೇಡಿಕೆಯಿಟ್ಟಿದ್ದರು. ಇದನ್ನೂ ಓದಿ: ಜಿ7 ದೇಶಗಳು ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ದರದಲ್ಲಿ ರಷ್ಯಾದಿಂದ ಭಾರತ ತೈಲ ಖರೀದಿ
Advertisement
ಬಳಿಕ ಡಿಸೆಂಬರ್ 2 ರಂದು ಆಸ್ಪತ್ರೆಯ 5 ಮುಖ್ಯ ಸರ್ವರ್ಗಳು ಸೈಬರ್ ದಾಳಿಗೆ ಒಳಗಾಗಿತ್ತು. ಇದರಿಂದ ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾಗಳಿಗೆ ಹಾನಿಯಾಗಿತ್ತು. ಈ ಸೈಬರ್ ದಾಳಿಯನ್ನು ಚೀನಾದ ಹ್ಯಾಕರ್ಗಳು ನಡೆಸಿರುವ ಶಂಕೆಯಿದೆ ಎಂದು ಮೂಲಗಳು ತಿಳಿಸಿದ್ದವು.
Advertisement
ಡಿಸೆಂಬರ್ 4 ರಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿಯೂ ಸೈಬರ್ ದಾಳಿಯಾಗಿರುವುದಾಗಿ ವರದಿಯಾಗಿದೆ. ಆದರೆ ಏಮ್ಸ್ನಲ್ಲಿ ನಡೆದಿರುವಷ್ಟು ದಾಳಿ ತೀವ್ರವಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್ಕೇಸ್ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ