ನವದೆಹಲಿ: ಪತ್ನಿಯ ಜೊತೆಗೆ ಜಗಳವಾಡಿದ್ದ ಏಮ್ಸ್ ವೈದ್ಯನೊಬ್ಬ ಅಪಾರ್ಟಮೆಂಟ್‍ನ ನಾಲ್ಕನೇ ಮಹಡಿಯಿಂದ ಜಿಗಿದು ಪ್ರಾಣಬಿಟ್ಟ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.
ರಾಜಸ್ಥಾನದ ನಾಗೌರ್ ಮೂಲದ ಮನಿಶ್ ಶರ್ಮಾ (34) ಆತ್ಮಹತ್ಯೆ ಮಾಡಿಕೊಂಡ ಏಮ್ಸ್ ವೈದ್ಯ. ದಕ್ಷಿಣ ದೆಹಲಿಯ ಹಾಜ್ ಖಾಸ್ ಪ್ರದೇಶ ಅಪಾರ್ಟಮೆಂಟ್ ನಲ್ಲಿ ವಾಸವಿದ್ದ ಶರ್ಮಾ, ಬುಧವಾರ ಕಟ್ಟಡದಿಂದ ಜಿಗಿದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಏನಿದು ಪ್ರಕರಣ?:
ಡಾ.ಶರ್ಮಾ ಸ್ಥಳೀಯ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರು ತಿಂಗಳ ಹಿಂದಷ್ಟೇ ಚಂಡಿಗಢ್‍ದ ಪಿಜಿಐನ ಹಿರಿಯ ವೈದ್ಯೆ ತ್ರಿಪತಿ ಚೌದ್ರಿ ಜೊತೆಗೆ ವಿವಾಹವಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ ಶರ್ಮಾ ಬುಧವಾರ ಅತಿಯಾಗಿ ಮದ್ಯ ಹಾಗೂ ಮಾತ್ರೆ ಸೇವಿಸಿದ್ದರು. ಈ ವೇಳೆ ಪತ್ನಿಯ ಜೊತೆಗೆ ಜಗಳವಾಡಿ, ಹಲ್ಲೆ ಮಾಡಿದ್ದಾರೆ. ಇಬ್ಬರ ಜಗಳ ಕೇಳಿಸಿಕೊಂಡ ನೆರೆಮನೆಯವರು ಬಂದು ತ್ರಿಪತಿ ಚೌದ್ರಿ ಅವರನ್ನು ರಕ್ಷಿಸಿದ್ದಾರೆ.
Advertisement
Advertisement
ಜಗಳದ ಬಳಿಕ ಏಕಾಂಗಿಯಾಗಿ ಮನೆಯಲ್ಲಿ ಉಳಿದಿದ್ದ ಶರ್ಮಾ, ಬಾಲ್ಕನಿಯಿಂದ ಜಿಗಿದಿದ್ದಾರೆ. ನಾಲ್ಕನೇ ಮಹಡಿಯಿಂದ ಬಿದ್ದಿದ್ದರಿಂದ ಶರ್ಮಾ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯಿಂದ ಗಾಬರಿಗೊಂಡ ಪತ್ನಿ ಹಾಗೂ ಅಪಾರ್ಟಮೆಂಟ್‍ನ ಕೆಲವರು ಶರ್ಮಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶರ್ಮಾ ಇಂದು ಮೃತಪಟ್ಟಿದ್ದಾರೆ.
Advertisement
ಶರ್ಮಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣದ ಕುರಿತು ತನಿಖೆ ಆರಂಭವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv