ನವದೆಹಲಿ: ಜನಾಂಗೀಯ ಸಂಘರ್ಷದ ಕುಲುಮೆಯಲ್ಲಿ ಬೇಯುತ್ತಿರುವ ಮಣಿಪುರಕ್ಕೆ (Manipur) ಶನಿವಾರ ವಿರೋಧ ಪಕ್ಷಗಳ (Opposition) ಸಂಸದರ ನಿಯೋಗ ಭೇಟಿ ನೀಡಲಿದೆ. 16 ಪಕ್ಷಗಳ 20 ಸಂಸದರು ನಿಯೋಗದಲ್ಲಿದ್ದು ಜನರನ್ನು ಭೇಟಿಯಾಗಿ ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ.
ಈ ಬಗ್ಗೆ ಎಐಸಿಸಿ (AICC) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಸಂಸದ ಡಾ. ನಾಸೀರ್ ಹುಸೇನ್, ಶನಿವಾರ ಬೆಳಗ್ಗೆ ಸಂಸದರ ನಿಯೋಗ ಮಣಿಪುರಕ್ಕೆ ತೆರಳಲಿದ್ದು, ಹಿಂಸಾಚಾರದಿಂದ ಹಾನಿಗೊಳಗಾದ ಗುಡ್ಡಗಾಡು ಪ್ರದೇಶಗಳು ಮತ್ತು ಕಣಿವೆಗಳಿಗೆ ಭೇಟಿ ನೀಡಲಿದೆ ಎಂದು ತಿಳಿಸಿದರು.
Advertisement
Advertisement
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಕ್ರಮವಾಗಿ 184 ಮತ್ತು 267 ನಿಯಮಗಳ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡದೆ ಭಾರತೀಯ ಜನತಾ ಪಕ್ಷವು ಹಠಮಾರಿ ವರ್ತನೆ ತೋರುತ್ತಿದ್ದು, ಪ್ರತಿಪಕ್ಷಗಳ ನಿರಂತರ ಬಳಿಕವೂ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನೊಳಗೆ ಮಾತನಾಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
Advertisement
ಸಂಸದರ ನಿಯೋಗವನ್ನು ಮಣಿಪುರಕ್ಕೆ ಕಳುಹಿಸುವ ಮೂಲಕ ಪ್ರತಿಪಕ್ಷಗಳು ಮಣಿಪುರದ ಸಂತ್ರಸ್ತ ಜನರು ಮತ್ತು ಅವರ ಸಂಕಷ್ಟದ ಬಗ್ಗೆ ಕಳವಳವಿದೆ ಮತ್ತು ಅವರ ಜೊತೆಗಿದ್ದೇವೆ ಎನ್ನುವ ಸಂದೇಶ ರವಾನಿಸುವ ಪ್ರಯತ್ನ ಎಂದು ಸಂಸದರು ಹೇಳಿದರು. ಇದನ್ನೂ ಓದಿ: ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ: ವಿವಾದಿತ ಹೇಳಿಕೆ ನೀಡಿದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ
Advertisement
ನಿಯೋಗವು ಮಣಿಪುರ ರಾಜ್ಯಪಾಲರಿಂದ ಸಮಯ ಕೇಳಿದೆ ಮತ್ತು ಭಾನುವಾರ ಬೆಳಗ್ಗೆ ಅವರನ್ನು ಭೇಟಿ ಮಾಡಲಿದೆ. ಸದಸ್ಯರು ತಮ್ಮ ಸಂಶೋಧನೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಬಯಸುತ್ತಾರೆ. ಆದರೆ ಸಂಸತ್ತಿನ ಒಳಗೆ ಚರ್ಚೆಗೆ ಅವಕಾಶ ನೀಡದಿದ್ದಲ್ಲಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಾಸೀರ್ ಹುಸೇನ್ ಹೇಳಿದರು.
ನಿಯೋಗದಲ್ಲಿ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ರಾಜೀವ್ ರಂಜನ್ ಲಾಲನ್ ಸಿಂಗ್, ಎಂಎಸ್ ಸುಶ್ಮಿತಾ ದೇವ್, ಎಂಎಸ್ ಕನಿಮೋಳಿ ಕರುಣಾನಿಧಿ, ಸಂತೋಷ್ ಕುಮಾರ್, ಎಎ ರಹೀಮ್, ಪ್ರೊ. ಮನೋಜ್ ಕುಮಾರ್ ಝಾ, ಜಾವೇದ್ ಅಲಿ ಖಾನ್, ಮಹುವಾ ಮಜಿ, ಪಿಪಿ ಮೊಹಮ್ಮದ್ ಫೈಜಲ್, ಅನೀಲ್ ಪ್ರಸಾದ್ ಹೆಗ್ಡೆ, ಇಟಿ ಮೊಹಮ್ಮದ್ ಬಶೀರ್, ಎನ್‌ಕೆ ಪ್ರೇಮಚಂದ್ರನ್, ಸುಶೀಲ್ ಗುಪ್ತಾ, ಅರವಿಂದ್ ಸಾವಂತ್, ಡಿ ರವಿಕುಮಾರ್, ತಿರು ತೋಲ್ ತಿರುಮಾವಳವನ್, ಜಯಂತ್ ಸಿಂಗ್ ಮತ್ತು ಎಂಎಸ್ ಫುಲೋ ದೇವಿ ನೇತಮ್ ಇರಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಡ್ರೋನ್ ಮೂಲಕ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ
Web Stories