ಚಂಡೀಗಢ: ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋನಾಲಿ ಪೋಗಟ್ ಸೋಲು ಅನುಭವಿಸಿದ್ದಾರೆ. ಈ ಬೇಸರದಲ್ಲೇ ಸೋನಾಲಿ ಭಾವನಾತ್ಮಕ ವಿಡಿಯೋ ಮಾಡಿ ಟಿಕ್‍ಟಾಕ್‍ನಲ್ಲಿ ಹಂಚಿಕೊಂಡಿದ್ದು, ಸದ್ಯ ಸಖತ್ ವೈರಲ್ ಆಗಿದೆ.
ಹರ್ಯಾಣದ ಟಿಕ್‍ಟಾಕ್ ಸ್ಟಾರ್ ಸೋನಾಲಿ ಪೋಗಟ್ ಜನಪ್ರಿಯತೆಯನ್ನು ಲಾಭ ಪಡೆದುಕೊಳ್ಳಲು ಹೊರಟಿದ್ದ ಬಿಜೆಪಿ, ಅವರಿಗೆ ಅದಮ್‍ಪುರ ಕ್ಷೇತ್ರದಿಂದ ಟಿಕೆಟ್ ಕೊಟ್ಟಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಶ್ನೋಯಿ ಎದುರು ಸೋನಾಲಿ ಪೋಗಟ್ ಸೋಲನ್ನು ಅನುಭವಿಸಿದರು. ಇದೇ ಬೇಸರದಲ್ಲಿದ್ದ ಸೋನಾಲಿ ಭಾವನಾತ್ಮಕ ವಿಡಿಯೋ ಒಂದನ್ನು ಮಾಡಿ ಟಿಕ್‍ಟಾಕ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ ವಿಡಿಯೋ ನೋಡಿದ ನೆಟ್ಟಿಗರು ಸೋನಾಲಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ.
Advertisement
https://twitter.com/scribe_prashant/status/1187343307199770624
Advertisement
ಆದಂಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದು, 11 ಬಾರಿ ಬಿಶ್ನೋಯಿ ಕುಟುಂಬದ ಸದಸ್ಯರೇ ಸತತವಾಗಿ ಗೆಲುವಿನ ವಿಜಯಮಾಲೆ ಧರಿಸುತ್ತಾ ಬಂದಿದ್ದಾರೆ. ಹೀಗಾಗಿ 29,471 ಮತಗಳ ಅಂತರದಿಂದ ಸೋನಾಲಿ ಪೋಗಟ್ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಷ್ಣೋಯಿ ಎದುರು ಸೋತಿದ್ದಾರೆ. ಕುಲದೀಪ್ ಬಿಶ್ನೋಯಿ 63,693 (ಶೇ.51.7) ಮತಗಳನ್ನು ಪಡೆದುಕೊಂಡಿದ್ದಾರೆ. ಸೋನಾಲಿ ಪೋಗಟ್ 34,222 (ಶೇ.27.78) ಮತಗಳನ್ನು ಪಡೆದುಕೊಂಡಿದ್ದಾರೆ.
Advertisement
Advertisement
ಹರ್ಯಾಣದ ಹಿಸಾರ್ ಜಿಲ್ಲೆಯ ಸಂತ ನಗರದ ನಿವಾಸಿ ಸೋನಾಲಿ ತಮ್ಮ ಟಿಕ್ ಟಾಕ್ ವಿಡಿಯೋಗಳ ಮೂಲಕ ಚರ್ಚೆಯಲ್ಲಿದ್ದರು. ಹರ್ಯಾಣದ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಸೋನಾಲಿ ಆದಂಪುರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಹರ್ಯಾಣ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯೆಯಾಗಿದ್ದರಿಂದ ಸೋನಾಲಿ ಪೋಗಟ್ ಟಿಕೆಟ್ ಪಡೆದು ಚುನಾವಣಾ ಕಣಕ್ಕೆ ಇಳಿದಿದ್ದರು.
ಹರ್ಯಾಣದ ಮಾಜಿ ಮುಖ್ಯಮಂತ್ರಿ ಚೌಧರಿ ಭಜನ್ ಲಾಲ್ ಪುತ್ರ ಕುಲದೀಪ್ ಬಿಶ್ನೋಯಿ ಕ್ಷೇತ್ರ ಉಳಿಸಿಕೊಳ್ಳಲು ಭಾರೀ ಪ್ರಚಾರ ನಡೆಸಿದ್ದರು. ಹರ್ಯಾಣ 12 ವಿಧಾನಸಭಾ ಚುನಾವಣೆಯಲ್ಲಿ 11 ಬಾರಿ ಆದಂಪುರ ಕ್ಷೇತ್ರದಲ್ಲಿ ಬಿಶ್ನೋಯಿ ಕುಟುಂಬಸ್ಥರೇ ಗೆಲ್ಲುತ್ತಾ ಬಂದಿದ್ದಾರೆ. ಜಾಟ್ ಸಮುದಾಯದ ಕುಲದೀಪ್ ಮೂರು ಬಾರಿ ಶಾಸಕರಾಗಿ ಮತ್ತು ಒಂದು ಸಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹರ್ಯಾಣ ಕಾಂಗ್ರೆಸ್ಸಿನ ಜಾಟ್ ಸಮುದಾಯದ ನಾಯಕರಾಗಿಯೂ ಕುಲದೀಪ್ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಹರ್ಯಾಣದ ಹೆಚ್ಚು ಜಾಟ್ ಸಮುದಾಯದ ಜನರು ವಾಸಿಸುವ ಕ್ಷೇತ್ರಗಳಲ್ಲಿ ಕುಲ್‍ದೀಪ್ ಕೈ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದರು. ಜನ್‍ನಾಯಕ್ ಜನತಾ ಪಾರ್ಟಿಯ ರಮೇಶ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ಆದಂಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.