ಹೆಚ್ಚು ತೂಕವಿರುವ ಯುವತಿ ಮಾಡೋ ಸ್ಟಂಟ್ ನಿಮಗೆ ಸಾಧ್ಯವೇ! – ವಿಡಿಯೋ ನೋಡಿ

Public TV
2 Min Read
Monica Dehli 4

– ಯೋಗಾಸನದ ಮೂಲಕವೇ ಫಾಲೋವರ್ಸ್ ಹೆಚ್ಚಿಸಿಕೊಂಡ್ಲು ದೆಹಲಿ ಬೆಡಗಿ

ನವದೆಹಲಿ: ಯೋಗಾಸನ ಹಾಗೂ ವಿವಿಧ ರೀತಿಯ ಸ್ಟಂಟ್ ಗಳ ಪೋಸ್ಟ್ ಮೂಲಕವೇ ಯುವತಿಯೊಬ್ಬರು ಫೇಸ್‍ಬುಕ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ನವದೆಹಲಿ ನಿವಾಸಿ ಮೋನಿಕಾ ಸಾಹು ಯೋಗಾಸನ ಹಾಗೂ ಸ್ಟಂಟ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೆಚ್ಚು ತೂಕ ಹೊಂದಿರುವ ಮೋನಿಕಾ ಯೋಗಾಸನದ ಮೂಲಕ, ನಾನು ಆಕ್ಟೀವ್ ಆಗಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ. ಇನ್ ಸ್ಟಾಗ್ರಾಮ್ ಖಾತೆ ಮೂಲಕ ವಿಡಿಯೋ ಹಂಚಿಕೊಂಡಿರುವ ಮೋನಿಕಾ ಅವರನ್ನು ನವೆಂಬರ್ 16ರವರೆಗೆ ಒಟ್ಟು 33.3 ಸಾವಿರ ಜನರು ಫಾಲೋ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಫೇಸ್ ಬುಕ್‍ನಲ್ಲಿ 1.3 ಸಾವಿರಕ್ಕೂ ಅಧಿಕ ಜನ ಫಾಲೋವರ್ಸ್ ಇದ್ದಾರೆ.

Monica Dehli

ಭಾರವಾದ ದೇಹವಿದ್ದರೂ ಮೋನಿಕಾ ಸಾಹಸ ರೀತಿಯ ಯೋಗಾಸನ ಮಾಡುತ್ತಾರೆ. ಈ ಮೂಲಕ ಹಂತ ಹಂತವಾಗಿ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಂಡು, ಸೌಂದರ್ಯ ಹೆಚ್ಚಿಸಿಕೊಂಡಿದ್ದಾರೆ. ಸತತ ಪ್ರಯತ್ನದಿಂದ ಮೋನಿಕಾ ಯೋಗಾಸದಲ್ಲಿ ಪಳಗಿದ್ದು, ಈಗ ಅನೇಕ ನೆಟ್ಟಿಗರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.

ಸಾಮಾನ್ಯರು ಮಾಡಲು ಸಾಧ್ಯವಾಗದ ಯೋಗಾಸನ, ಸ್ಟಂಟ್‍ಗಳನ್ನು ಮೋನಿಕಾ ಮಾಡುತ್ತಾರೆ. ಜೊತೆಗೆ ತನ್ನ ಆತ್ಮೀಯರಿಗೂ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ಕಾಲು ಅಗಲಿಸಿ ನೆಲಕ್ಕೆ ನೇರವಾಗಿ ಕೂರುವುದಕ್ಕೆ ಸಾಮಾನ್ಯರು ಭಾರೀ ಕಷ್ಟಪಡಬೇಕಾಗುತ್ತದೆ. ಆದರೆ ಮೋನಿಕಾ ಯಾವುದೇ ಕಷ್ಟಪಡದೇ ಈ ಆಸನವನ್ನು ಮಾಡುತ್ತ, ಹೆಜ್ಜೆ ಹಾಕುತ್ತಾರೆ.

Monica Dehli 3

ಆರೋಗ್ಯಯುತ ಜೀವನಕ್ಕೆ ಪ್ರೇರಣೆ ನೀಡುವುದು ನನ್ನ ಉದ್ದೇಶ. ಹೆಚ್ಚು ತೂಕವಿದ್ದರೂ, ಯೋಗಾಸನದ ಮೂಲಕ ಚಟುವಟಿಕೆಯಿಂದ ಇರಬಹುದು ಎನ್ನುವುದಕ್ಕೆ ನಾನೇ ಉದಾಹರಣೆ. ನನ್ನ ಸ್ನೇಹಿತರಿಗೂ ಇದನ್ನು ಕಲಿಸಿಕೊಡುತ್ತಿರುವೆ ಎಂದು ಇನ್ ಸ್ಟಾಗ್ರಾಮ್ ಪೋಸ್ಟ್‍ನಲ್ಲಿ ಮೋನಿಕಾ ಹೇಳಿಕೊಂಡಿದ್ದಾರೆ.

ಮೋನಿಕಾ ಅವರು, ತಾವು ಮಾಡುವ ಆಸನ ಹಾಗೂ ಸ್ಟಂಟ್‍ಗಳ ಮಾಹಿತಿ ನೀಡಿ, ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ಅನೇಕ ಮಂದಿ ಅವರನ್ನು ಅನುಕರಣೆ ಮಾಡಿ, ತಾವು ಮಾಡಲು ಯತ್ನಿಸುತ್ತಾರೆ. ಈ ಮೂಲಕ ಮೋನಿಕಾ ತಮ್ಮ ಅಭಿಮಾನಿಗಳ ಗೆದ್ದಿದ್ದಾರೆ.

Monica Dehli 1

ಓದುತ್ತಲೇ ಹೇಗೆ ಆಸನ ಮಾಡಬಹುದು. ಗೃಹಿಣಿಯರು, ಮಹಿಳೆಯರು ಮೇಕಪ್ ಮಾಡುಕೊಳ್ಳುತ್ತಲೇ ಯೋಗ ಮಾಡಬಹುದು. ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಬಳಕೆ, ವಸ್ತುಗಳನ್ನು ಜೋಡಿಸುವುದು ಹೀಗೆ ವಿವಿಧ ಕೆಲಸಗಳಲ್ಲಿ ತಾವು ಹೇಗೆಲ್ಲ ಯೋಗಾಸನ ಮಾಡುತ್ತಾರೆ ಎನ್ನುವುದನ್ನು ಮೋನಿಕಾ ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ.

Monica Dehli 5

https://www.instagram.com/p/BpQvO8Hl3xE/

https://www.instagram.com/p/BpD-iIBlD_8/

https://www.instagram.com/p/BmX3-kFgzHM/

Monica Dehli 2

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *