ನವದೆಹಲಿ: ಬಿಜೆಪಿಯ ‘ಶೀಷ್ ಮಹಲ್’ (Sheesh Mahal) ಆರೋಪ, ಹೊಸ ಅಬಕಾರಿ ನೀತಿ (Liquor Policy) ಹಗರಣದಲ್ಲಿ ಘಟಾನುಘಟಿ ನಾಯಕರೇ ಜೈಲುಪಾಲು.. ಹೀಗೆ ಆಡಳಿತಾವಧಿಯಲ್ಲಿ ಕೊನೇ ಘಳಿಗೆಯಲ್ಲಿ ಎದುರಾದ ಆರೋಪಗಳೇ ದೆಹಲಿಯಲ್ಲಿ ಆಪ್ ಸೋಲಿಗೆ ಪ್ರಮುಖ ಕಾರಣಗಳು ಎಂದು ವಿಶ್ಲೇಷಿಸಲಾಗಿದೆ.
ದೆಹಲಿಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಆಡಳಿತಾರೂಢ ಎಎಪಿ ಸೋಲಿಗೆ ಕಾರಣಗಳೇನು? ಇದನ್ನೂ ಓದಿ: ಪ್ರಧಾನಿ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನ ಬಿಜೆಪಿ ಗೆಲ್ಲಿಸಿದ್ದಾರೆ: ಬೊಮ್ಮಾಯಿ
Advertisement
Advertisement
ಆಡಳಿತ ವಿರೋಧಿ
2015 ಮತ್ತು 2020 ರ ಚುನಾವಣೆಗಳಲ್ಲಿ ದೆಹಲಿಯಲ್ಲಿ ಎಎಪಿ ದೊಡ್ಡ ಗೆಲುವು ಸಾಧಿಸಿತು. ಎರಡು ಅವಧಿಗಳಲ್ಲಿ ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಅಭೂತಪೂರ್ವ ಕೆಲಸಗಳು ಆದವು. ವಿದ್ಯುತ್ ಮತ್ತು ನೀರಿನ ಸಬ್ಸಿಡಿಗಳು ಮತದಾರರನ್ನು ಸಂತೋಷಪಡಿಸಿದವು. ಈ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರೂ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ನೆಲ ಕಂಡುಕೊಳ್ಳಲು ಹೆಣಗಾಡಿತು.
Advertisement
ಕಾಲಾನಂತರದಲ್ಲಿ, ದೆಹಲಿಯ ವಾಯುಮಾಲಿನ್ಯ ಸೇರಿದಂತೆ ಈಡೇರದ ಭರವಸೆಗಳು ದೆಹಲಿ ನಿವಾಸಿಗಳನ್ನು ಕಾಡಲು ಪ್ರಾರಂಭಿಸಿದವು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಕಾರ್ಯನಿರ್ವಹಣೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಆಡಳಿತಾರೂಢ ಎಎಪಿ ಆರೋಪಿಸಿತು. ಆದರೆ, 10 ವರ್ಷ ಆಡಳಿತ ನಡೆಸಿದ ಎಎಪಿ ನೆಪವಾಗಿ ಹೀಗೆ ಆರೋಪ ಮಾಡುತ್ತಿದೆ ಎಂದೇ ಜನರು ಭಾವಿಸಿದರು. ಕೇಂದ್ರದೊಂದಿಗೆ ಎಎಪಿಯ ನಿರಂತರ ಜಟಾಪಟಿ ಹೊತ್ತಿನಲ್ಲೇ ಬಿಜೆಪಿಯ ‘ಡಬಲ್ ಎಂಜಿನ್’ ಭರವಸೆ ಜನಸಾಮಾನ್ಯರಿಗೆ ಇಷ್ಟವಾಯಿತು. ಅದೀಗ, ಫಲಿತಾಂಶದಲ್ಲಿ ಕಂಡುಬಂದಿದೆ. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್ʼ – ಬಿಜೆಪಿ ಚಾಂಪಿಯನ್!
Advertisement
ಶೀಷ್ ಮಹಲ್
ಚುನಾವಣೆ ಸಮೀಪದ ಹೊತ್ತಲ್ಲೇ, ಕೇಜ್ರಿವಾಲ್ ಮತ್ತು ದೆಹಲಿ ಸಿಎಂ ಅತಿಶಿ ಅವರಿಗೆ ನೀಡಿದ್ದ ಬಂಗ್ಲೆ (ಶೀಷ್ ಮಹಲ್) ವಿಚಾರವಾಗಿ ಎಎಪಿ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯಿತು. ಈ ಶೀಷ್ ಮಹಲ್‌ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಿಸಲಾಯಿತು. ಚುನಾವಣೆ ಹೊತ್ತಲ್ಲೇ ಬಿಜೆಪಿಯ ಗಂಭೀರ ಆರೋಪವು ಎಎಪಿಗೆ ನುಂಗಲಾರದ ತುತ್ತಾಗಿತ್ತು.
ದೆಹಲಿ ಮುಖ್ಯಮಂತ್ರಿ ಕಚೇರಿ ನಿರ್ಮಾಣಕ್ಕೆ 33 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಮೂರು ಬಾರಿ ದುಬಾರಿ ವಸ್ತುಗಳನ್ನು ಬಳಸಿಯೇ ಈ ಮನೆ ನವೀಕರಣ ಮಾಡಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಇದು ಕೂಡ ದೆಹಲಿ ಚುನಾವಣಾ ಫಲಿತಾಂಶದಲ್ಲಿ ಪರಿಣಾಮ ಬೀರಿದೆ. ಇದನ್ನೂ ಓದಿ: ದೆಹಲಿಯಲ್ಲಿ ಸುಳ್ಳಿನ ಆಳ್ವಿಕೆ ಕೊನೆಗೊಂಡಿದೆ: ಅಮಿತ್ ಶಾ
ಬಿಜೆಪಿಯ ‘ಶೀಷ್ ಮಹಲ್’ ಆರೋಪಕ್ಕೆ ‘ರಾಜಮಹಲ್’ ಎಂಬ ಪ್ರತ್ಯಾರೋಪವನ್ನು ಎಎಪಿ ಆಗ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಶ್ರೀಮಂತ ಜೀವನಶೈಲಿ ನಡೆಸುತ್ತಿದ್ದಾರೆಂದು ಪ್ರತಿದಾಳಿ ನಡೆಸಿತ್ತು. ಆದರೆ, ಬಿಜೆಪಿಯ ನಿರಂತರ ಪ್ರಚಾರವು ಮತದಾರರ ಮೇಲೆ ಪ್ರಭಾವ ಬೀರಿದೆ.
ಹೊಸ ಅಬಕಾರಿ ನೀತಿ ಹಗರಣ
ದೆಹಲಿ ಆಡಳಿತಾವಧಿಯಲ್ಲಿ ಎಎಪಿ ವಿರುದ್ಧ ಕೇಳಿಬಂದ ಆರೋಪ ಅಬಕಾರಿ ನೀತಿ ಹಗರಣ. ದೆಹಲಿಯಲ್ಲಿ ಈಗ ರದ್ದುಗೊಂಡಿರುವ ಮದ್ಯ ನೀತಿಯ ಸುತ್ತಲಿನ ಭ್ರಷ್ಟಾಚಾರ ಆರೋಪಗಳು ಎಎಪಿಯಲ್ಲಿ ಕೋಲಾಹಲ ಸೃಷ್ಟಿಸಿತು. ಹೊಸ ನೀತಿಯು ಮದ್ಯದ ಬಾಟಲಿಗಳ ಮೇಲೆ ‘ಒಂದನ್ನು ಖರೀದಿಸಿದರೆ, ಮತ್ತೊಂದು ಉಚಿತ’ ಎಂದು ಬರೆದು ನೀಡುತ್ತಿದೆ. ಕೇಜ್ರಿವಾಲ್ ಸರ್ಕಾರವು ‘ದೆಹಲಿಯನ್ನು ಕುಡುಕರ ನಗರವನ್ನಾಗಿ ಪರಿವರ್ತಿಸುತ್ತಿದೆ’ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೇ, ಮದ್ಯ ನೀತಿ ಹಗರಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ಬಿಜೆಪಿ ದೂರಿತ್ತು. ಇದನ್ನೂ ಓದಿ: ಮುಸ್ಲಿಮ್ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
ಕೇಂದ್ರ ಸಂಸ್ಥೆಗಳ ತನಿಖೆಗಳು ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಉನ್ನತ ನಾಯಕರನ್ನು ಬಂಧಿಸಲು ಕಾರಣವಾಯಿತು. ಸಿಸೋಡಿಯಾ ಬಂಧನದ ಬಳಿಕ ಉಪಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಎಎಪಿ ತನ್ನ ಸಂಪುಟವನ್ನು ಪುನರ್ರಚಿಸಬೇಕಾಯಿತು. ನಂತರ ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು. ಐದು ತಿಂಗಳು ಜೈಲಿನಲ್ಲಿಯೇ ಇದ್ದರು. ಪ್ರಮುಖ ನಾಯಕರ ಬಂಧನವು ಎಎಪಿ ಪ್ರಬಲ್ಯ ಕಳೆದುಕೊಳ್ಳಲು ಕಾರಣವಾಯಿತು.
ಈ ಎಲ್ಲಾ ಕಾರಣಗಳು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕುರ್ಚಿ ಕಳೆದುಕೊಳ್ಳಲು ಕಾರಣವಾಯಿತು. ಆಪ್ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ಚುನಾವಣೆ ಪ್ರಣಾಳಿಕೆಯಲ್ಲಿ ದೆಹಲಿ ಜನತೆಗೆ ಬಿಜೆಪಿ ನೀಡಿದ ಭರವಸೆಗಳು ಕೆಲಸ ಮಾಡಿವೆ. ದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಯಲ್ಲಿ ಮಧ್ಯಮ ವರ್ಗದ ಜನರಿದ್ದಾರೆ. ಬಜೆಟ್ ಸಂದರ್ಭದಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡಿದ್ದು, ಬಿಜೆಪಿಗೆ ವರದಾನವಾಗಿದೆ. ಇದನ್ನೂ ಓದಿ: ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ