ಚಿಕಿತ್ಸೆಗೆ ಬಂದ ಅಪ್ರಾಪ್ತ ರೋಗಿಯನ್ನ ಅತ್ಯಾಚಾರಗೈದ ವೈದ್ಯ

Public TV
0 Min Read
stethoscope

ನವದೆಹಲಿ: ಅಪ್ರಾಪ್ತ ರೋಗಿಯ ಮೇಲೆ ಅತ್ಯಾಚಾರ ಎಸಗಿದ್ದ ವೈದ್ಯನನ್ನು ದೆಹಲಿಯ ಸುಲ್ತಾನ್‍ಪುರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ದೆಹಲಿಯ ರೋಹಿಣಿ ಪ್ರದೇಶದ ನಿವಾಸಿ ಜೋಗಿಂದರ್ ಸಿಂಗ್ ಬಂಧಿತ ಆರೋಪಿ. ಬಾಲಕಿ ಬುಧವಾರ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದಾಗ ಜೋಗಿಂದರ್ ಸಿಂಗ್ ಅತ್ಯಾವಾರ ಎಸಗಿದ್ದಾನೆ.

ಈ ಸಂಬಂಧ ದೂರು ದಾಖಲಿಸಿಕೊಂಡ ಸುಲ್ತಾನ್‍ಪುರಿ ಪೊಲೀಸರು ಶುಕ್ರವಾರ ಜೋಗಿಂದರ್ ಸಿಂಗ್‍ನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 ಅಡಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *