ಕೊಪ್ಪಳ: ಇತ್ತೀಚೆಗಷ್ಟೇ ವಿಚಿತ್ರ ಮಗುವೊಂದು ಜನಿಸಿದ್ದ ಕಾರಣ ಸುದ್ದಿಯಾದ ಕೊಪ್ಪಳ ಇದೀಗ ಮತ್ತೆ ಇದೇ ವಿಚಾರದಲ್ಲಿ ಸುದ್ದಿಯಾಗಿದೆ.
ಕುಷ್ಟಗಿ ತಾಲೂಕಿನ ಮನ್ನೇರಾಳ ಗ್ರಾಮದಲ್ಲಿ ವಿಲಕ್ಷಣ ಶಿಶು ಜನನವಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಮನ್ನೇರಾಳ ಗ್ರಾಮದ ಗಂಗವ್ವ ಗೌಡರ ಅನ್ನೋ ಮಹಿಳೆ ಶುಕ್ರವಾರದಂದು ಈ ಶಿಶುವಿಗೆ ಜನ್ಮ ನೀಡಿದ್ದು, ಮಗುವಿನ ತಲೆಯಲ್ಲಿ ಮಾಂಸ ಬೆಳೆಯುತ್ತಿದೆ.
Advertisement
Advertisement
ಇತ್ತೀಚೆಗಷ್ಟೇ ಕುಷ್ಟಗಿ ತಾಲೂಕಿನ ಜುಮುಲಾಪೂರ ಗ್ರಾಮದ ಅನಸೂಯಮ್ಮ ಎಂಬವರು ವಿಚಿತ್ರ ಶಿಶುವಿಗೆ ಜನ್ಮ ನೀಡಿದ್ದರು. ಎರಡು ಕೆಜಿ ತೂಕದ ಹೆಣ್ಣು ಮಗುವಿನ ಕಿವಿ, ಮೂಗು, ಬಾಯಿ, ಕಣ್ಣು ಬೇರೆ ಬೇರೆ ಜಾಗದಲ್ಲಿ ಅಸಹಜವಾಗಿ ಇದ್ದು, ಜನರ ಅಚ್ಚರಿಗೆ ಕಾರಣವಾಗಿತ್ತು. ಅಲ್ಲದೆ ಶಿಶುವಿನ ತಲೆಯಲ್ಲಿ ನೀರು ತುಂಬಿ ದೊಡ್ಡ ಗಾತ್ರದಲ್ಲಿತ್ತು. ಹೆರಿಗೆ ಬಳಿಕ ಮಗುವಿನ ತಲೆ ಒಡೆದು ನೀರು ಹೊರಕ್ಕೆ ಬಂದು ಶಿಶು ಮೃತಪಟ್ಟಿತ್ತು.
Advertisement
ಇದೀಗ ಗಂಗವ್ವ ಕೂಡ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು, ಇಂತಹ ವಿಚಿತ್ರ ಶಿಶುಗಳ ಜಜನಕ್ಕೆ ಕಾರಣವೇನೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.
Advertisement
ಇದನ್ನೂ ಓದಿ: ರಾಯಚೂರಿನಲ್ಲಿ ಕಣ್ರೆಪ್ಪೆಯೇ ಇಲ್ಲದ ಮಗು ಜನನ
ಇದನ್ನೂ ಓದಿ: ಬೀದರ್: ಮಗುವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ!