ನಮ್ಮಲ್ಲಿ ಹೆಚ್ಚಿನವರು ಯಾವಾಗಲೂ ಹೆಚ್ಚುವರಿ ದೋಸೆ ಹಿಟ್ಟನ್ನು ಮನೆಯಲ್ಲಿ ತಯಾರಿಸಿಟ್ಟಿರುತ್ತಾರೆ. ಅಥವಾ ದೋಸೆ ಹಿಟ್ಟು ಆಗಾಗ ಉಳಿದು ಹೋಗಬಹುದು. ಈ ಸಂದರ್ಭದಲ್ಲಿ ನೀವು ಚಿಕನ್ ಕೀಮಾ ಇದ್ದಾಗ ಈ ರೆಸಿಪಿನ್ನೊಮ್ಮೆ ಟ್ರೈ ಮಾಡಲೇ ಬೇಕು. ದೋಸೆಯೊಂದಿಗೆ ಚಿಕನ್ ಕೀಮಾ ಸಖತ್ ರುಚಿಯಾಗಿರುತ್ತದೆ. ದೋಸೆಗೆ ಆಲೂಗಡ್ಡೆ ಸಾಗು ಬದಲು ಒಮ್ಮೆ ಕೀಮಾ ಕೂಡಾ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ದೋಸೆ ಹಿಟ್ಟಿಗೆ:
ಉದ್ದಿನ ಬೇಳೆ – 1 ಕಪ್
ಅಕ್ಕಿ – 3 ಕಪ್
ಮೆಂತ್ಯ – 1 ಟೀಸ್ಪೂನ್
ಅಡುಗೆ ಸೋಡಾ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ದೋಸೆ ತಯಾರಿಸಲು ಬೇಕಾಗುವಷ್ಟು
ಕೀಮಾ ತಯಾರಿಸಲು:
ಚಿಕನ್ ಕೀಮಾ – ಅರ್ಧ ಕೆಜಿ (ಮಟನ್ ಕೂಡಾ ಬಳಸಬಹುದು)
ಈರುಳ್ಳಿ – 2
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – 2 ಟೀಸ್ಪೂನ್
ಆಮ್ಚೂರ್ ಪುಡಿ (ಒಣ ಮಾವಿನಪುಡಿ) – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷು
ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಎಣ್ಣೆ – 3 ಟೀಸ್ಪೂನ್ ಇದನ್ನೂ ಓದಿ: ಬಾದಾಮಿ ಗ್ರೇವಿಯ ಚಿಕನ್ – ಯಮ್ಮೀ ಫ್ಲೇವರ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬೇಳೆ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ಕನಿಷ್ಠ 5-6 ಗಂಟೆಗಳ ಕಾಲ ನೆನೆಸಿಡಿ. ಜೊತೆಯಲ್ಲಿ ಮೆಂತ್ಯ ಬೀಜವನ್ನೂ ನೆನೆಸಿ.
* ಮೃದುವಾದ ಹಿಟ್ಟಿಗೆ ಸಾಕಾಗುವಷ್ಟು ನೀರು ಸೇರಿಸಿ ಅವುಗಳನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳಿ. ಬಳಿಕ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಉಪ್ಪು ಸೇರಿಸಿ ಮತ್ತು ರಾತ್ರಿ ಹುದುಗಲು ಬಿಡಿ.
* ನಂತರ ಕೀಮಾವನ್ನು ತೊಳೆಯಿರಿ ಮತ್ತು ನೀರನ್ನು ಸಂಪೂರ್ಣವಾಗಿ ಹರಿಯಲು ಬಿಡಿ.
* ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಮತ್ತು ಸ್ವಲ್ಪ ನೀರು ಸೇರಿಸಿ.
* ಕೀಮಾ, ಉಪ್ಪು ಮತ್ತು ಒಣ ಮಸಾಲೆಗಳನ್ನು ಸೇರಿಸಿ ಬೇಯಿಸಿಕೊಳ್ಳಿ.
* ಬಳಿಕ ಉರಿಯನ್ನು ಆಫ್ ಮಾಡಿ ಪಕ್ಕಕ್ಕಿಡಿ.
* ಈಗ ದೋಸೆ ಹಿಟ್ಟನ್ನು ತವಾ ಮೇಲೆ ಒಂದು ಸೌಟಿನಷ್ಟು ಹರಡಿ, ಅದರ ಮೇಲೆ ಚಮಚದಷ್ಟು ಕೀಮಾ ಮಿಶ್ರಣವನ್ನು ಹರಡಿ.
* ದೋಸೆಯನ್ನು ಗರಿಗರಿಯಾಗಿ ಮಾಡಲು ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿ.
* ಬಳಿಕ ದೋಸೆಯನ್ನು ರೋಲ್ ಮಾಡಿ ಮತ್ತು ಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಚಿಕನ್ ಕೀಮಾ ಬಿರಿಯಾನಿ – ವಾವ್ ಎನ್ನದೇ ಇರೋಕಾಗಲ್ಲ
Advertisement
Web Stories