ಮನೆಯಲ್ಲಿ ಆಗಾಗ ಅನ್ನ ಉಳಿದು ಹೋಗೋದು ಸಾಮಾನ್ಯ. ರಾತ್ರಿ ಹೆಚ್ಚಾದ ಅನ್ನ ಬೆಳಗ್ಗೆ ಚಿತ್ರಾನ್ನ ಮಾಡೋದು ಎಲ್ಲರಿಗೂ ಗೊತ್ತು. ಆದರೆ ಪ್ರತಿ ಬಾರಿ ಚಿತ್ರಾನ್ನ ಮಾಡಿದ್ರೆ ಯಾರಿಗೆ ತಾನೇ ಬೋರ್ ಎನಿಸಲ್ಲ? ಮುಂದಿನ ಬಾರಿ ಉಳಿದು ಹೋದ ಅನ್ನದಿಂದ ಬೆಳ್ಳುಳ್ಳಿ ರೈಸ್ ಮಾಡೋದು ಖಂಡಿತಾ ಮರೆಯಬೇಡಿ. ಇದು ಮಾಡೋಕೆ ತುಂಬಾ ಸುಲಭವಾಗಿದ್ದು, ಮುಂದೆ ಅನ್ನ ಉಳಿದು ಹೋದಾಗ ಪದೇ ಪದೇ ಇದನ್ನು ಖಂಡಿತ ಮಾಡುತ್ತಲೇ ಇರುತ್ತೀರಿ.
Advertisement
ಬೇಕಾಗುವ ಪದಾರ್ಥಗಳು:
ಎಣ್ಣೆ – 1 ಟೀಸ್ಪೂನ್
ಬೆಣ್ಣೆ – ಅರ್ಧ ಟೀಸ್ಪೂನ್
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 3
ಹೆಚ್ಚಿದ ಈರುಳ್ಳಿ – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
ಹೆಚ್ಚಿದ ಮಶ್ರೂಮ್ – 3
ಅನ್ನ – 3 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಸೋಯಾ ಸಾಸ್ – ಒಂದೂವರೆ ಟೀಸ್ಪೂನ್
ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಬಳಿಕ ಬೆಳ್ಳುಳ್ಳಿಯನ್ನು ತೆಗೆದು ಪಕ್ಕಕ್ಕಿಡಿ.
* ಈಗ ಉರಿಯನ್ನು ಹೆಚ್ಚಿಸಿ, ಅದೇ ಪ್ಯಾನ್‌ಗೆ ಬೆಣ್ಣೆ ಸೇರಿಸಿ, ಅದು ಕರಗಿದ ಬಳಿಕ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿದುಕೊಳ್ಳಿ.
* ಬಳಿಕ ಮಶ್ರೂಮ್ ಸೇರಿಸಿ 2-3 ನಿಮಿಷ ಬೇಯಿಸಿಕೊಳ್ಳಿ.
* ಬಳಿಕ ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಈಗ ಅನ್ನವನ್ನು ಪ್ಯಾನ್‌ಗೆ ಹಾಕಿ 2-3 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ ಸೋಯಾ ಸಾಸ್, ಕರಿ ಮೆಣಸಿನಪುಡಿ ಸೇರಿಸಿ ಮಿಶ್ರಣ ಮಾಡಿ.
* ಈಗ ಹುರಿದಿಟ್ಟಿದ್ದ ಬೆಳ್ಳುಳ್ಳಿ ಹಾಗೂ ಸ್ಪ್ರಿಂಗ್ ಆನಿಯನ್ ಅನ್ನು ಸೇರಿಸಿ ಮಿಕ್ಸ್ ಮಾಡಿ.
* ಇದೀಗ ರುಚಿಕರ ಬೆಳ್ಳುಳ್ಳಿ ರೈಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಗುಜರಾತಿ ಬಟಾಟಾ ಪೋಹಾ