ಬೆಂಗಳೂರು: ಡಿಕೆಶಿ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಎಂಬ ಮೊಯ್ಲಿ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಸಚಿವರು ರಕ್ಷಣಾತ್ಮಕ ಹೇಳಿಕೆ ಕೊಟ್ಟಿದ್ದು, ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ (MB Patil) ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದರು.ಇದನ್ನೂ ಓದಿ: ಡಿಕೆಶಿ ಲೂಸ್ ಲೂಸಾಗಿ ಮಾತನಾಡಿರಬಹುದು – ಸಿ.ಟಿ.ರವಿ ಟಕ್ಕರ್
Advertisement
ನಗರದಲ್ಲಿ ಎಂ.ಬಿ.ಪಾಟೀಲ್ ಮಾತನಾಡಿ, ಖರ್ಗೆ, ರಾಹುಲ್, ಸೋನಿಯಾ ಗಾಂಧಿ ಇದ್ದಾರೆ, ಇವರೆಲ್ಲರೂ ಅಂತಿಮ. ಮೊಯ್ಲಿಯವರು ಪಕ್ಷದ ಹಿರಿಯರು. ಅವರ ಹೇಳಿಕೆಗೆ ಹೈಕಮಾಂಡ್ ಕ್ರಮಕೈಗೊಳ್ಳುತ್ತದೆ. ಪೂರ್ವ ನಿರ್ಧರಿತನಾ ಎಂಬ ಪ್ರಶ್ನೆಯನ್ನು ಅವರ ಹತ್ತಿರ ಕೇಳಿ, ಅವರ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಅವರು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವರು. ಅದರ ಬಗ್ಗೆ ಅವರನ್ನೇ ಕೇಳಬೇಕು. ಅಧಿಕಾರ ಹಂಚಿಕೆ ಸೂತ್ರ ನಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಇನ್ನೂ ಸಚಿವ ಸಂತೋಷ್ ಲಾಡ್ ಮಾತನಾಡಿ, ಅದೆಲ್ಲವೂ ಹೈಕಮಾಂಡ್‌ಗೆ ಬಿಟ್ಟದ್ದು. ಮೊಯ್ಲಿ ಅವರ ಅಭಿಪ್ರಾಯ ಹೇಳಿದ್ದಾರೆ, 140 ಶಾಸಕರಲ್ಲಿ ಎರಡು, ಮೂರು ಶಾಸಕರೂ ಹೇಳಿರಬಹುದು. ಎಲ್ಲರ ಅಭಿಪ್ರಾಯವೇ ಮುಖ್ಯ. ನನ್ನ ವೈಯುಕ್ತಿಕ ಅಭಿಪ್ರಾಯ ಹೇಳೋಕೆ ಆಗಲ್ಲ. ನಾನು ಹೇಳುವವನೂ ಅಲ್ಲ. ಕೊನೆಯಲ್ಲಿ ಎಲ್ಲರೂ ಪಕ್ಷದ ವೇದಿಕೆಗೆ ಬರಬೇಕು ಎಂದು ತಿಳಿಸಿದರು.ಇದನ್ನೂ ಓದಿ: ‘ಅರಗಿಣಿ ಮೇಲೆ ‘ವಿದ್ಯಾಪತಿ’ಗೆ ಲವ್- ನಾಗಭೂಷಣ್, ಮಲೈಕಾ ರೊಮ್ಯಾಂಟಿಕ್ ಸಾಂಗ್ ಔಟ್