ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಭದ್ರತಾ ವ್ಯವಸ್ಥೆಗೆ ವಿಶೇಷ ಒತ್ತನ್ನು ನೀಡಲಾಗುತ್ತಿದೆ. ಚೀನಾ ಹಾಗೂ ಪಾಕಿಸ್ತಾನದ ಉಪಟಳವನ್ನು ನಿಯಂತ್ರಿಸಲು, ಉಗ್ರರನ್ನು ಸಮರ್ಥವಾಗಿ ಎದುರಿಸಲು ಭಾರತ ಸದೃಢವಾಗಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ), ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ 1.45 ಲಕ್ಷ ಕೋಟಿ ರೂ. ಮೌಲ್ಯದ 10 ನಿರ್ಣಾಯಕ ಪ್ರಸ್ತಾವನೆಗಳನ್ನು ಅನುಮೋದಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
1,44,716 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಡಿಎಸಿ ಒಪ್ಪಿಗೆ ನೀಡಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಒಟ್ಟು ವೆಚ್ಚದಲ್ಲಿ, 99% ಭಾರತೀಯ ಕಂಪನಿಗಳಿಂದ ಮತ್ತು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಸಾಮಾಗ್ರಿಗಳನ್ನು ಖರೀದಿಗೆ ಸಮ್ಮತಿಸಲಾಗಿದೆ. ಇಷ್ಟೇ ಅಲ್ಲದೇ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲು 75,000 ಕೋಟಿ ರೂ. ವೆಚ್ಚದಲ್ಲಿ ಇನ್ನೂ ಏಳು ಪ್ರಾಜೆಕ್ಟ್-17 ಬಿ ಸ್ಟೆಲ್ತ್ ಫ್ರಿಗೇಟ್‌ಗಳ ನಿರ್ಮಾಣಕ್ಕೂ ಡಿಎಸಿ ಅನುಮತಿ ನೀಡಿದೆ.
ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಮರ್ಥ್ಯ ಹೊಂದಿರುವ ಭಾರತದ ಐದು ಪ್ರಮುಖ ಕಂಪನಿಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL), ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (MDL), ಮತ್ತು ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಇಂಜಿನಿಯರ್ಸ್ ಲಿಮಿಟೆಡ್ (GRSE) ಕಂಪನಿಗಳಿಂದ ಯುದ್ಧ ಸಾಮಾಗ್ರಿಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ.
FRCV ಯುದ್ಧ ಟ್ಯಾಂಕರ್
ಭಾರತೀಯ ಸೇನೆಯ ಟ್ಯಾಂಕ್ ಫ್ಲೀಟ್ ಆಧುನೀಕರಣಕ್ಕಾಗಿ, ಭವಿಷ್ಯದ ಸಿದ್ಧ ಯುದ್ಧ ವಾಹನಗಳ (ಎಫ್‌ಆರ್‌ಸಿವಿ) ಖರೀದಿಗೆ ಒಪ್ಪಿಗೆ ಸಿಕ್ಕಿದೆ. FRCV ಗಳು ಉತ್ತಮ ಚಲನಶೀಲತೆ, ಎಲ್ಲಾ ಭೂಪ್ರದೇಶ ಸಾಮರ್ಥ್ಯ, ಬಹು-ಪದರದ ರಕ್ಷಣೆಗಳು, ನಿಖರತೆ ಮತ್ತು ನೈಜ-ಸಮಯದಲ್ಲಿ ದಾಳಿ ನಡೆಸಲು, ಮುಂದಿನ ಪೀಳಿಗೆಯ ಯುದ್ಧ ಟ್ಯಾಂಕರ್ ಇದಾಗಿರಲಿದೆ. ಇದರ ಮುಖ್ಯ ಉದ್ದೇಶ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲು ಮತ್ತು ರಾತ್ರಿಯ ಸಮಯದಲ್ಲೂ ರಕ್ಷಣೆ ಒದಗಿಸಲಿದೆ.
ಈ ಟ್ಯಾಂಕರ್‌ನಲ್ಲಿ ಕಮಾಂಡರ್ ಕ್ಯಾಬಿನ್‌ನ್ನು ಒಂದೇ ಹೈ ಮೊಬಿಲಿಟಿ ವೆಹಿಕಲ್ ಮೇಲೆ ಜೋಡಿಸಲಾಗಿದ್ದು, ಈ ವ್ಯವಸ್ಥೆಯು ಎರಡು ಗನ್‌ಗಳನ್ನು ಏಕಕಾಲದಲ್ಲಿ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಪಾರುಗಾಣಿಕಾ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ICG ಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಭಾರತೀಯ ಸೇನೆಯು 1,700 ಕ್ಕೂ ಹೆಚ್ಚು ಫ್ಯೂಚರ್ ರೆಡಿ ಕಾಂಬ್ಯಾಟ್ ವೆಹಿಕಲ್‌ಗಳನ್ನು (ಎಫ್‌ಆರ್‌ಸಿವಿ) ಹಂತಹಂತವಾಗಿ ಖರೀದಿಸಲು ಸಜ್ಜಾಗಿದೆ.
ಏರ್ ಡಿಫೆನ್ಸ್ ಫೈರ್ ಕಂಟ್ರೋಲ್ ರಾಡಾರ್
ಇದು ವೈಮಾನಿಕ ಗುರಿಯನ್ನು ಪತ್ತೆಹಚ್ಚುತ್ತದೆ ಮತ್ತು ಟ್ರ್ಯಾಕ್ ಮಾಡುತ್ತದೆ. ಈ ಮೂಲಕ ಇದು ಶತೃಗಳ ದಾಳಿಗೆ ಸೂಕ್ತ ಪ್ರತ್ತ್ಯುತ್ತರ ನೀಡಲು ಸಹಕಾರಿಯಾಗಲಿದೆ. ಈ ಉಪಕರಣವನ್ನು ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್ ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ.
ಡಾರ್ನಿಯರ್-228 ವಿಮಾನ
ಭಾರತೀಯ ಕೋಸ್ಟ್ ಗಾರ್ಡ್ (ICG) ಸಾಮರ್ಥ್ಯಗಳನ್ನು ಹೆಚ್ಚಿಸಲು ಡಾರ್ನಿಯರ್-228 ವಿಮಾನಗಳ ಖರೀದಿಗೆ ಸಮ್ಮತಿಸಲಾಗಿದೆ. ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ಹೆಚ್ಚಿನ ಕಾರ್ಯಾಚರಣೆಯ ವೈಶಿಷ್ಟ್ಯಗಳನ್ನು ಹೊಂದಿರುವ ಸುಧಾರಿತ ತಂತ್ರಜ್ಞಾನ ಸಾಮರ್ಥ್ಯವನ್ನು ಹೊಂದಿದೆ. ಹುಡುಕಾಟ ಮತ್ತು ಪಾರುಗಾಣಿಕಾ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗೆ ಇದು ಅನುಕೂಲವಾಗಲಿದೆ.
ಡಾರ್ನಿಯರ್ 228 ಸಾಮಾನ್ಯವಾಗಿ ಶಾರ್ಟ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯದ ವಿಮಾನವಾಗಿದೆ. ಇದು ಒರಟಾದ ರನ್ ವೇನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಅತ್ಯಾಧಿನಿಕ ಹಡಗುಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ.
ಕಾರ್ಯಾಚರಣೆಗಳ ಸಮಯದಲ್ಲಿ ಸ್ಥಳದಲ್ಲೇ ದುರಸ್ತಿ ಮಾಡಲು ಅನುಕೂಲವಾಗುವಂತೆ ಯುದ್ ಧವಾಹನಗಳಿಗೆ ಟ್ರ್ಯಾಕ್ಡ್ ವ್ಯವಸ್ಥೆಗೆ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ. ಈ ಉಪಕರಣವನ್ನು ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಮತ್ತು ಯಾಂತ್ರಿಕೃತ ಪದಾತಿಸೈನ್ಯದ ಬೆಟಾಲಿಯನ್ ಮತ್ತು ಆರ್ಮರ್ಡ್ ರೆಜಿಮೆಂಟ್ ಎರಡಕ್ಕೂ ಇದರ ಬಳಕೆಗೆ ಒಪ್ಪಿಗೆ ಸಿಕ್ಕಿದೆ.