ತುಮಕೂರು: ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿ ತನ್ನ ಬೆಂಬಲಿಗರನ್ನು ಕಳುಹಿಸಿ ಗುಬ್ಬಿ ಪಟ್ಟಣದಲ್ಲಿ ಅಂಗಡಿಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
10ನೇ ವಾರ್ಡಿನ ಪರಾಜಿತ ಅಭ್ಯರ್ಥಿ ಹರೀಶ್ ಬೆಂಬಲಿಗರು ದಯಾನಂದ ಎಂಬುವವರ ಪ್ಲೈವುಡ್ ಮತ್ತು ಗ್ಲಾಸ್ ಅಂಗಡಿಗೆ ನುಗ್ಗಿ ಕಂಪ್ಯೂಟರ್ ಸೇರಿದಂತೆ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅಂಗಡಿ ಮಾಲೀಕ ದಯಾನಂದ ವಾರ್ಡ್ ನಂಬರ್ 10 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ನರಸಿಂಹಮೂರ್ತಿ ಪರ ಪ್ರಚಾರ ನಡೆಸಿದ್ದರು. ಹಾಗಾಗಿ ತನ್ನ ಸೋಲಿಗೆ ದಯಾನಂದನೇ ಕಾರಣ ಎಂದು ಆಕ್ರೋಶಗೊಂಡು ಬೆಂಬಲಿಗರಿಂದ ದಾಂಧಲೆ ನಡೆಸಿದ್ದಾರೆ ಎಂಬ ಆರೋಪ ಬಂದಿದೆ.
ಇದೇ ವಾರ್ಡ್ 10 ರಲ್ಲಿ ಜೆಡಿಎಸ್ ಅಭ್ಯರ್ಥಿ ಸಿದ್ದರಾಮಣ್ಣ ಗೆಲುವು ಸಾಧಿಸಿದ್ದಾರೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv