ಸೋನಿಯಾ, ರಾಹುಲ್, ಸೀತಾರಾಮ್ ಯೆಚೂರಿ ವಿರುದ್ಧ ಮಾನನಷ್ಟ ಕೇಸ್

Public TV
1 Min Read
Rahul Gandhi Sitaram Yechury sonia gandhiGauri Lankesh

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಆರ್‍ಎಸ್‍ಎಸ್ ಕೈವಾಡವಿದೆ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ವಿರುದ್ಧ ಮಾನನನಷ್ಟ ಕೇಸ್ ದಾಖಲಾಗಿದೆ.

ಕುರ್ಲಾ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಕ್ರಿಮಿನಲ್ ಕೇಸ್ ದಾಖಸಿದ್ದೇನೆ. ಅಕ್ಟೋಬರ್ 22ಕ್ಕೆ ಅರ್ಜಿಯ ವಿಚಾರಣೆ ಬರಬಹುದು ಎಂದು ಮುಂಬೈನ ಆರ್‍ಎಸ್‍ಎಸ್ ಸ್ವಯಂ ಸೇವಕ, ವಕೀಲ ಧ್ರುತಿಮಾನ್ ಜೋಷಿ ಹೇಳಿದ್ದಾರೆ.

ಯಾವುದೇ ಸಾಕ್ಷ್ಯಗಳನ್ನು ನೀಡದೇ ತನಿಖೆ ಪೂರ್ಣಗೊಳ್ಳದೇ ಗೌರಿ ಲಂಕೇಶ್ ಹತ್ಯೆಯನ್ನು ಬಲಪಂಥೀಯ ಸಂಘಟನೆಯನ್ನು ನಡೆಸಿದ್ದಾರೆ ಎಂದು ಇವರು ಹೇಳಿಕೆ ನೀಡಿದ್ದಾರೆ. ಇದರಿಂದ ಆರ್‍ಎಸ್‍ಎಸ್ ಇಮೇಜ್‍ಗೆ ಧಕ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ನಾಯಕರ ಈ ಆರೋಪಗಳಿಂದ ನನ್ನ ಸ್ನೇಹಿತರು ನಿಮ್ಮ ನಿಮ್ಮ ಸಂಘಟನೆಯ ಸಿದ್ಧಾಂತಗಳಿಂದ ಹತ್ಯೆ ನಡೆದಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರಿಂದಾಗಿ ವೈಯಕ್ತಿಕವಾಗಿ ನನಗೆ ಬೇಸರವಾಗಿದೆ ಎಂದು ಧ್ರುತಿಮಾನ್ ಜೋಷಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *