-ಆರ್ ಟಿಐನಲ್ಲಿ ಬಯಲಾಯ್ತು ರಹಸ್ಯ
ಚಂಡೀಗಢ: ನವೆಂಬರ್ 14ರಂದು ಬಾಲಿವುಡ್ ಹಾಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಇಟಲಿಯಲ್ಲಿ ಮದುವೆ ಆಗಿದ್ದಾರೆ. ಈ ಸಂಬಂಧ ಮದುವೆ ರಿಜಿಸ್ಟರ್ ಮಾಡಲು ಮಾತ್ರ ಸಾಧ್ಯವಾಗಿಲ್ಲ. ಕುಟುಂಬಸ್ಥರು ಮದುವೆಯನ್ನು ರಿಜಿಸ್ಟರ್ ಮಾಡಿಸಲು ಮುಂದಾಗಿದ್ದು, ಕಾನೂನು ತೊಡಕುಗಳು ಆರಂಭವಾಗಿವೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ.
ಭಾರತ ದೇಶದ ನಿವಾಸಿಗಳು ವಿದೇಶದಲ್ಲಿ ಮದುವೆಯಾಗಲು ನಿಶ್ಚಯಿಸಿದ್ದರೆ, ವಿದೇಶಿ ವಿವಾಹ ಅಧಿನಿಯಮ 1969ರ ಅನುಸಾರ ನವಜೋಡಿ ಅಲ್ಲಿಯ ರಾಯಭಾರಿ ಕಚೇರಿಯಲ್ಲಿ ದಾಖಲಾತಿಗಳನ್ನು ಸಲ್ಲಿಸಬೇಕು ಅಥವಾ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು. ಆದ್ರೆ ದೀಪ್‍ವೀರ್ ಈ ಯಾವುದೇ ಕಾನೂನುಗಳನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಭಾರತದ ಯಾವುದೇ ರಾಜ್ಯದಲ್ಲಿ ಇವರ ಮದುವೆಯ ನೋಂದಣಿ ಅಸಾಧ್ಯ ಎಂದು ಹರಿಯಾಣದ ಹೈಕೋರ್ಟ್ ವಕೀಲ ಹೇಮಂತ್ ಕುಮಾರ್ ಹೇಳುತ್ತಾರೆ.
ಹೇಮಂತ್ ಕುಮಾರ್ ಭಾರತದ ರಾಯಭಾರಿ ಕಚೇರಿ ದೀಪ್ ವೀರ್ ಮದುವೆ ಕುರಿತಾಗಿ ಆರ್.ಟಿ.ಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ವಿದೇಶದಲ್ಲಿ ಮದುವೆಯಾಗುತ್ತಿರುವ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ವಿದೇಶಿ ವಿವಾಹ ಅಧಿನಿಯಮವನ್ನು ಪಾಲನೆ ಮಾಡಿದ್ದಾರೆಯೇ ಎಂದು ಪ್ರಶ್ನೆ ಮಾಡಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಭಾರತೀಯರು ವಿದೇಶದಲ್ಲಿ ಮದುವೆ ಆಗಲು ಇಷ್ಟಪಡುತ್ತಾರೆ. ವಿದೇಶದಲ್ಲಿ ಮದುವೆಯಾಗುವ ಜೋಡಿ ಸಂಬಂಧಿಸಿದ ವಿದೇಶಿ ರಾಯಭಾರಿ ಕಚೇರಿ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಬೇಕು. ಒಂದು ವೇಳೆ ಜೋಡಿ ಕಾನೂನು ಪಾಲನೆ ಮಾಡದೇ ಇದ್ದಲ್ಲಿ ಮದುವೆ ಅಸಿಂಧು ಆಗುತ್ತೆ ಎಂಬುದು ಹೇಮಂತ್ ಅವರ ವಾದವಾಗಿದೆ.
2017 ಡಿಸೆಂಬರ್ 11ರಂದು ವಿದೇಶದಲ್ಲಿ ವಿವಾಹವಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಮದುವೆ ನೋಂದಣಿ ಇದೂವರೆಗೆ ಆಗಿಲ್ಲ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv