ಕಿಚ್ಚ ಸುದೀಪ್ (Kiccha Sudeep) ಅಭಿನಯಿಸುತ್ತಿರುವ 47ನೇ ಚಿತ್ರದ ಚಿತ್ರೀಕರಣ ಇಂದಿನಿಂದ ಶುರುವಾಗಿದೆ. ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ, ನಾಯಕಿ ಹೆಸರೂ ರಿವೀಲ್ ಆಗಿಲ್ಲ. ಆದರೆ ನಾಯಕಿ ಕುರಿತಾಗಿ ಸಣ್ಣದೊಂದು ಸುದ್ದಿ ಹಬ್ಬಿದ್ದು ಕಿಚ್ಚನ ಜೊತೆ ನಟಿಸುವ ಆ ಬೆಡಗಿ ಹೆಸರು ದೀಪ್ಷಿಕಾ (Deepshikha Nagpal) ಎನ್ನಲಾಗುತ್ತಿದೆ.
ಮುದ್ದು ಮುಖದ ತಮಿಳು ನಟಿ ದೀಪ್ಷಿಕಾ ಅಷ್ಟೊಂದು ಹೆಸರು ಮಾಡಿರುವ ನಟಿ ಅಲ್ಲ. ಆದರೆ ಅಭಿನಯ ಹಾಗೂ ಸೌಂದರ್ಯದಿಂದ ಅಭಿನಯಿಸಿದ್ದ ಕೆಲವೇ ಕೆಲವು ಚಿತ್ರಗಳಲ್ಲಿ ನ್ಯಾಯ ಸಲ್ಲಿಸಿರುವ ಬ್ಯೂಟಿ. ಮೈಖಲ್, ರವಿಕುಲ ರಘುರಾಮ, ಮಾರ್ಗನ್ ಚಿತ್ರಗಳಲ್ಲಿ ದೀಪ್ಷಿಕಾ ಅಭಿನಯಿಸಿದ್ದಾರೆ. ಇದೀಗ ಬಹುಭಾಷೆಯಲ್ಲಿ ತಯಾರಾಗುತ್ತಿರುವ ಕಿಚ್ಚನ ಮ್ಯಾಕ್ಸ್ ಸೀಕ್ವೆಲ್ ಚಿತ್ರಕ್ಕೆ ಇವರೇ ಪ್ರಮುಖ ಲೀಡ್ ಆ್ಯಕ್ಟ್ರೆಸ್ ಎನ್ನಲಾಗುತ್ತಿದೆ. ಕಿಚ್ಚನ ಜೊತೆ ಡ್ಯುಯೆಟ್ ಹಾಡ್ತಾರಾ ಅಥವಾ ಕಥೆಯೇ ಪ್ರಮುಖವಾದ ಚಿತ್ರ ಇದಾಗಿರೋದ್ರಿಂದ ಸಪೋರ್ಟಿಂಗ್ ಕ್ಯಾರೆಕ್ಟರ್‌ನಲ್ಲಿ ಬರ್ತಾರಾ ನೋಡ್ಬೇಕು. ಇದನ್ನೂ ಓದಿ: ಡೆವಿಲ್‌ಗೆ ಯುದ್ಧಾತಂಕ – ವಿದೇಶಿ ಪ್ರವಾಸ ಮರುನಿಗದಿ ಕೋರಿ ದರ್ಶನ್ ಅರ್ಜಿ
ಮ್ಯಾಕ್ಸ್ ನಿರ್ದೇಶಕರ ಜೊತೆ ಸುದೀಪ್ ಕೈಜೋಡಿಸಿದ್ದು, ಅದೇ ಟೆಕ್ನಿಕಲ್ ತಂಡವೇ ಮುಂದುವರೆದಿದೆ. ಶನಿವಾರ ಬೆಂಗಳೂರಿನಲ್ಲಿ ಮುಹೂರ್ತ ನಡೆದಿದ್ರೆ ಸೋಮವಾರ ಚೆನೈನಲ್ಲಿ ಮುಹೂರ್ತ ನಡೆದು ಚಿತ್ರೀಕರಣವೂ ಪ್ರಾರಂಭವಾಗಿದೆ. ಇನ್ನುಳಿದಂತೆ ತಾರಾಗಣದ ಕುರಿತು ರಹಸ್ಯ ಕಾಪಾಡಿಕೊಂಡಿತ್ತು ತಂಡ. ಇದೀಗ ನಟಿಯಾಗಿ ದೀಪ್ಷಿಕಾ ಆಯ್ಕೆಯಾಗಿರೋ ಸುದ್ದಿ ಕೇಳಿಬಂದಿದೆ.