Connect with us

ಬದಲಾಯ್ತು ಘೂಮರ್ ಸಾಂಗ್-ಮರೆಯಾಯ್ತು ದೀಪಿಕಾ ಸೊಂಟ

ಬದಲಾಯ್ತು ಘೂಮರ್ ಸಾಂಗ್-ಮರೆಯಾಯ್ತು ದೀಪಿಕಾ ಸೊಂಟ

ಮುಂಬೈ: ದೇಶಾದ್ಯಂತ ಸುದ್ದಿಯಾಗಿದ್ದ ಬಾಲಿವುಡ್‍ನ `ಪದ್ಮಾವತ್’ ಸಿನಿಮಾ ಜನವರಿ 25ರಂದು ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಪದ್ಮಾವತ್ ರಿಲೀಸ್‍ಗೆ ಭಾರೀ ವಿರೋಧ ವ್ಯಕ್ತವಾಗುತ್ತಲೇ ಸೆನ್ಸಾರ್ ಮಂಡಳಿಯ ಸಲಹೆ ಮೇರೆಗೆ ಚಿತ್ರದಲ್ಲಿ ಟೈಟಲ್ ಸೇರಿದಂತೆ ಹಲವು ಬದಲಾವಣೆಗಳನ್ನು ತರಲಾಗಿದೆ.

ಚಿತ್ರದ ಪ್ರಮುಖ ಹಾಡು ಘೂಮರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಚಿತ್ರತಂಡ ಮತ್ತೊಂದು ಬದಲಾವಣೆಗೊಂಡ ಘೂಮರ್ ಸಾಂಗ್ ಯುಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದೆ. ರಾಣಿ ಪದ್ಮಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ದೀಪಿಕಾ ಘೂಮರ್ ಡ್ಯಾನ್ಸ್ ಮಾಡುತ್ತಾರೆ. ಈ ಮೊದಲು ಬಿಡುಗೊಡೆಗೊಂಡಿದ್ದ ಹಾಡಿನಲ್ಲಿ ಕೆಲವು ಸೆಕೆಂಡ್ ದೀಪಿಕಾರ ಸೊಂಟ ಕಾಣಿಸುತ್ತಿತ್ತು. ಕರ್ಣಿ ಸೇನಾದಿಂದ ಆಕ್ರೋಶವಾಗುತ್ತಲೇ ಕಾಣುತ್ತಿದ್ದ ಸೊಂಟವನ್ನು ತೆಳುವಾದ ಬಟ್ಟೆಯಿಂದ ಮರೆ ಮಾಡಲಾಗಿದೆ.

ಚಿತ್ರದ ಬಿಡುಗಡೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟಸಾಧ್ಯ ಎಂಬ ಕಾರಣ ನೀಡಿ, ಪದ್ಮಾವತ್ ಚಿತ್ರದ ಪ್ರದರ್ಶನಕ್ಕೆ ರಾಜಸ್ಥಾನ, ಹರಿಯಾಣ, ಗುಜರಾತ್, ಮಧ್ಯಪ್ರದೇಶ ಸರ್ಕಾರಗಳು ಚಿತ್ರ ಬಿಡುಗಡೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದರೂ ಸಿನಿಮಾವನ್ನು ತಡೆಯುವ ಹಕ್ಕು ಯಾವ ರಾಜ್ಯಕ್ಕೂ ಇಲ್ಲ. ತಮ್ಮ ಸಿನಿಮಾ ಎಲ್ಲಾ ರಾಜ್ಯಗಳಲ್ಲೂ ಬಿಡುಗಡೆಯಾಗುವಂತೆ ಅವಕಾಶ ನೀಡಬೇಕೆಂದು ನಿರ್ಮಾಪಕರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಚಿತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣವೀರ್ ಸಿಂಗ್ ಜೀವ ಬೆದರಿಕೆ ಇರುವ ಕಾರಣ ಯಾರು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಚಿತ್ರದ ಬಿಡುಗಡೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. ಹೀಗಾಗಿ ಸೆನ್ಸಾರ್ ಬೋರ್ಡ್ ನಿಂದ ರಚಿಸಲಾದ ವಿಶೇಷ ತಂಡದಿಂದ ಚಿತ್ರವನ್ನ ವಿಮರ್ಶಿಸಲಾಗಿದೆ. ಸಿನಿಮಾ ಐತಿಹಾಸಿಕ ಕಥೆಯನ್ನು ಆಧರಿಸಿರುವುದರಿಂದ ತಂಡದಲ್ಲಿ ಇತಿಹಾಸಕಾರರು ಕೂಡ ಇದ್ದರು. ಉದಯಪುರ್ ಮೂಲದ ಅರವಿಂದ್ ಸಿಂಗ್, ಜೈಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಕೆಕೆ ಸಿಂಗ್ ಮತ್ತು ಡಾ.ಚಂದ್ರಮಣಿ ಸಿಂಗ್ ವಿಶೇಷ ತಂಡದಲ್ಲಿ ಇದ್ದರು. ಸದಸ್ಯರು ಐತಿಹಾಸಿಕ ಘಟನೆಗಳು, ದೇಶದ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಬಗ್ಗೆ ಜ್ಞಾನ ಹೊಂದಿದ ವ್ಯಕ್ತಿಗಳಾಗಿದ್ದು, ಕಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ರು ಎಂದು ಸೆನ್ಸಾರ್ ಬೋರ್ಡ್ ತಿಳಿಸಿದೆ. ಚಿತ್ರದ ಸುತ್ತ ವಿವಾದ ಹುಟ್ಟಿಕೊಂಡ ನಂತರ ಸೆನ್ಸಾರ್ ಬೋರ್ಡ್ ಪ್ರತಿಯೊಂದು ಅಂಶವನ್ನು ಪರಿಗಣಿಸಿ ಯು/ಎ ಪ್ರಮಾಣ ಪತ್ರ ನೀಡಿದೆ.

ಜನವರಿ 25ರಂದು ಪದ್ಮಾವತ್ ರಿಲೀಸ್ ಮಾಡಲು ನಿರ್ಧರಿಸಿದ್ದರಿಂದ ಅಕ್ಷಯ್‍ಕುಮಾರ್ ನಟನೆಯ `ಪ್ಯಾಡ್‍ಮ್ಯಾನ್’ನೊಂದಿಗೆ ಎದುರಾಗಿತ್ತು. ಗುರುವಾರ ಸಂಜಯ್ ಲೀಲಾ ಬನ್ಸಾಲಿಯ ಮನವಿ ಮೇರೆಗೆ ಅಕ್ಷಯ್ ಕುಮಾರ್ ತಮ್ಮ ಸಿನಿಮಾದ ದಿನಾಂಕವನ್ನು ಫೆಬ್ರವರಿ 09ಕ್ಕೆ ಮುಂದೂಡಿದ್ದಾರೆ.

ಇತ್ತೀಚೆಗೆ ಬಿಡುಗೊಡೆಗೊಂಡ ಘೂಮರ್ ಹಾಡಿನ ವಿಡಿಯೋ: 

ಮೊದಲಿಗೆ ಬಿಡುಗೊಡೆಯಾಗಿದ್ದ ಘೂಮರ್ ಹಾಡಿನ ವಿಡಿಯೋ: 

https://www.youtube.com/watch?time_continue=227&v=dl6NMEUQRPk

Advertisement
Advertisement