ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಬಿಕಿನಿ ಕೇವಲ ಅಶ್ಲೀಲವಷ್ಟೇ ಅಲ್ಲ, ಅದು ಪ್ರಚೋದನಕಾರಿ ಕೂಡ ಆಗಿದೆ ಎಂದು ಶಕ್ತಿಮಾನ್ ಪಾತ್ರಧಾರಿ ಮುಕೇಶ್ ಖನ್ನಾ ಪ್ರತಿಕ್ರಿಯೆ ನೀಡಿದ್ದಾರೆ. ಬೇಷರಂ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ ಎನ್ನುವುದು ಪ್ರಶ್ನೆಯಲ್ಲ. ಅದು ಚರ್ಚೆಯ ವಿಷಯ ಕೂಡ ಆಗಬಾರದು. ಚರ್ಚೆ ಮಾಡಬೇಕಾಗಿದ್ದು ಪ್ರಚೋದನಕಾರಿ ಆಗುವಂತಹ ಬಟ್ಟೆಗಳನ್ನು ಹಾಕಿದ್ದಾರೆ ಎನ್ನುವುದು ಎಂದಿದ್ದಾರೆ ಖನ್ನಾ.
Advertisement
ನಟಿಯೊಬ್ಬಳು ಪ್ರಚೋದನಕಾರಿ ಆಗುವಂತಹ ಬಟ್ಟೆ ಮತ್ತು ಭಂಗಿಯಲ್ಲಿ ಇದ್ದಾರೆ ಎನ್ನುವ ಅಂಶವನ್ನು ಸೆನ್ಸಾರ್ ಮಂಡಳಿಯು ಗಮನಿಸದೇ ಇರುವುದು ಅಚ್ಚರಿ ತಂದಿದೆ ಎಂದಿರುವ ಖನ್ನಾ. ವಿವೇಚನೆ ಇಲ್ಲದೇ ಈ ಹಾಡನ್ನು ಸೆನ್ಸಾರ್ ಮಾಡಲಾಯಿತಾ ಎಂದು ಪ್ರಶ್ನೆ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಲ್ಲಿ ಇರುವವರು ವಿವೇಚನೆ ಬಳಸಿಕೊಂಡು ಸೆನ್ಸಾರ್ ಮಾಡಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ
Advertisement
Advertisement
ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.
Advertisement
ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ.