ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ಬಾಲ್ಯದ ಫೋಟೋವನ್ನು ಇನ್ಸ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಅದಕ್ಕೆ ಗೆಳೆತಿ ದೀಪಿಕಾ ಪಡುಕೋಣೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ರಣವೀರ್ನ ಬ್ಯಾಲದ ಫೋಟೋದಲ್ಲಿ ವಿಚಿತ್ರವಾದ ಹೇರ್ ಸ್ಟೈಲ್ ಮಾಡಿದ್ದು, ಅದನ್ನು ನೋಡಿ ಇನ್ನಿತರ ನಟರು ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕ ಚೋಪ್ರಾ ಕೂಡ ಈ ಫೋಟೋಗೆ ಪ್ರತಿಕ್ರಿಯಿಸಿದ್ದರೂ, ದೀಪಿಕಾರವರ ಕಮೆಂಟ್ ಮಾತ್ರ ಎಲ್ಲರ ಗಮನವನ್ನು ಸೆಳೆದಿದೆ.
ರಣ್ವೀರ್ ಫೋಟೋ ನೋಡಿದ ದೀಪಿಕಾ ನೋ ಅಂತಾ ಬರೆದುಕೊಂಡು ಮೂರು ಮಂಗಗಳ ಎಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.
https://www.instagram.com/p/BkZZWJRALc0/?taken-by=ranveersingh
ರಣ್ವೀರ್ ಮತ್ತು ದೀಪಿಕಾ ಇಬ್ಬರ ಮದುವೆ ಇದೇ ವರ್ಷ ಆಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮದುವೆಗೆ ಸಂಬಂಧಿಸಿದಂತೆ ಇಬ್ಬರೂ ಮಾತ್ರ ಇದೂವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಜೋಡಿ ರೀಲ್ ಲೈಫ್ ನಂತೆ ನಿಜ ಜೀವನದಲ್ಲಿ ಒಂದಾಗಬೇಕು ಎಂದು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. 2018ರ ಹೊಸ ವರ್ಷದ ಆಚರಣೆ ವೇಳೆಯೂ ದೀಪಿಕಾ ಮತ್ತು ರಣ್ವೀರ್ ಇಬ್ಬರೇ ಪ್ರತ್ಯೇಕವಾಗಿ ಮಾಲ್ಡೀವ್ಸ್ ಗೆ ತೆರಳಿ ನ್ಯೂ ಇಯರ್ ಆಚರಣೆ ಮಾಡಿದ್ದರು ಎಂದು ವರದಿಯಾಗಿತ್ತು.
2013ರಲ್ಲಿ ತೆರೆಕಂಡ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಗೋಲಿಯೋಂ ಕೀ ರಾಸಲೀಲಾ: ರಾಮ್ಲೀಲಾ’ ಸಿನಿಮಾದಿಂದ ಡಿಪ್ವೀರ್ ಜೊತೆಯಾಗಿ ನಟಿಸಿದ್ದರು. ನಂತರ `ಬಾಜೀರಾವ್ ಮಸ್ತಾನಿ’ ಸಿನಿಮಾದಲ್ಲಿ ಒಂದಾದ ಈ ಜೋಡಿ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡಿತ್ತು. ಇನ್ನೂ ದೀಪಿಕಾ ನಟನೆಯ `ಫೈಂಡಿಂಗ್ ಫ್ಯಾನಿ’ ಚಿತ್ರದ ಒಂದು ಚಿಕ್ಕ ದೃಶ್ಯವೊಂದರಲ್ಲಿ ದೀಪಿಕಾಳ ಪತಿಯಾಗಿ ರಣ್ವೀರ್ ಬಣ್ಣ ಹಚ್ಚಿದ್ದರು. ಇದೇ ವರ್ಷ ತೆರೆಕಂಡಿದ್ದ ಪದ್ಮಾವತ್ ಸಹ ಬಾಲಿವುಡ್ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು.