ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಬಾಲಿವುಡ್ ಕ್ಯೂಟ್ ಕಪಲ್ ಅಂದರೆ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಎಂದರೆ ತಪ್ಪಾಗಲಾರದು. ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ರಣ್ವೀರ್ ಸಿಂಗ್ ಅವರು ಆಗಾಗ ದೀಪಿಕಾ ಪಡುಕೋಣೆ ಜೊತೆಗಿರುವ ಫೋಟೋ ಹಾಗೂ ವೀಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳುವ ಮೂಲಕ ಪತ್ನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇದನ್ನೂ ಓದಿ: ಕತ್ರಿನಾ,ವಿಕ್ಕಿ ವಿವಾಹ – 120 ವ್ಯಾಕ್ಸಿನೇಟೆಡ್ ಅತಿಥಿಗಳಿಗೆ ಮಾತ್ರ ಆಹ್ವಾನ
Advertisement
Advertisement
ಇದೀಗ ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತಿ ರಣ್ಸಿಂಗ್ ಬಗ್ಗೆ ಪೋಸ್ಟ್ವೊಂದನ್ನು ಹಾಕುವುದರ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಪೋಸ್ಟರ್ನಲ್ಲಿ ನನಗೆ ತಿಳಿಯದೇ ಇರುವ ವಿಚಾರದ ಬಗ್ಗೆ ಹೇಳಿಕೊಡುವ ವ್ಯಕ್ತಿಗಿಂತ ಆಕರ್ಷಕವಾದದ್ದು ಯಾವುದು ಇಲ್ಲ ಎಂದು ಇರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಈ ಪೋಸ್ಟ್ ಅನ್ನು ದೀಪಿಕಾ ರಣ್ವೀರ್ ಸಿಂಗ್ಗೆ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ
Advertisement
View this post on Instagram
ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಕಪ್ಪು ಬಣ್ಣದ ಸೀರೆ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನೂ ಈ ಫೋಟೋಗೆ ರಣ್ವೀರ್ ಸಿಂಗ್ ಕಾಮೆಂಟ್ ಮಾಡಿದ್ದರು.