– ಇಟಲಿಯಲ್ಲಿ ದೀಪಿಕಾ ಮದ್ವೆ ಸಿದ್ಧತೆ
– ಅತಿಥಿಗಳಿಗೆ ತಯಾರಾಗಲಿದೆ ವಿಶೇಷ ಆಹಾರ
ಮುಂಬೈ: ಇದೇ ಬುಧವಾರ ಮತ್ತು ಗುರುವಾರ ಕನ್ನಡತಿ ದೀಪಿಕಾ ಪಡುಕೋಣೆ ಮದುವೆ ಪಂಜಾಬಿ ಚೆಲುವನ ಜೊತೆ ನಡೆಯಲಿದೆ. ಈಗಾಗಲೇ ಎರಡು ಕುಟುಂಬಗಳು ಇಟಲಿಯ ಕೋಮೋ ನಗರ ತಲುಪಿವೆ. ಕೋಮೋ ನಗರದಲ್ಲಿ ರೆಸಾರ್ಟ್ ನಲ್ಲಿ ಮದುವೆಯ ಸಿದ್ಧತೆಗಳು ಆರಂಭವಾಗಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ದೀಪಿಕಾ ಮತ್ತು ರಣ್‍ವೀರ್ ಮದುವೆ ನೋಡಲು ದೇಶಾದ್ಯಂತ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಮದುವೆ ಪೂರ್ವ ಶಾಸ್ತ್ರಗಳನ್ನು ಮುಗಿಸಿಕೊಂಡಿರುವ ಜೋಡಿ ಬುಧವಾರ ಸಾಂಸಾರಿಕ ಜೀವನ ಪ್ರವೇಶಿಸಲಿದ್ದಾರೆ. ರಣ್‍ವೀರ್ ಪಂಜಾಬಿ ಸಂಪ್ರದಾಯಸ್ಥ ಕುಟುಂಬದವರಾಗಿದ್ದರೆ, ದೀಪಿಕಾ ದಕ್ಷಿಣ ಭಾರತದ ಅಪ್ಪಟ ಕನ್ನಡತಿ. ಹೀಗಾಗಿ ಮದುವೆ ಕಾರ್ಯಕ್ರಮ ಎರಡು ಸಂಪ್ರದಾಯದಂತೆ ನಡೆಯಲಿದೆ. ದೀಪಿಕಾ ಮೊದಲು ಪಂಜಾಬಿ ವಧುವಿನ ಲುಕ್ ನಲ್ಲಿ ಕಾಣಿಸಿಕೊಂಡ್ರೆ, ನಂತರ ಕನ್ನಡದ ಕೊಂಕಣಿ ಸಂಪ್ರದಾಯ ಉಡುಪಿನಲ್ಲಿ ಮಿಂಚಲಿದ್ದಾರೆ.
Advertisement
Advertisement
ಸ್ಪೆಶಲ್ ಡಿಶ್:
ಮದುವೆಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ಬಗೆಯ ಆಹಾರ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಮದುವೆಯಲ್ಲಿ ಬಗೆ ಬಗೆಯ ರೈಸ್ ಡಿಶಸ್ ಜೊತೆ ಪಂಜಾಬಿ ಊಟವು ಮೆನುವಿನಲ್ಲಿದೆ. ಈ ಎಲ್ಲ ಆಹಾರದ ಜೊತೆಗೆ ಇಟಾಲಿಯನ್ ಮತ್ತು ಕಾಂಟಿನೆಟಲ್ ಆಹಾರವು ಮೆನುವಿನಲ್ಲಿ ಇರಲಿದೆ. ವಿದೇಶಿ ಆಹಾರ ಸಿದ್ಧಪಡಿಸಲು ಸ್ವಿಟ್ಜಲ್ರ್ಯಾಂಡ್ ಬಾಣಸಿಗರನ್ನು ರೆಸ್ಟೋರೆಂಟ್ ಸಿಬ್ಬಂದಿ ನೇಮಕ ಮಾಡಿದ್ದಾರೆ.
Advertisement
ಏನದು ಷರತ್ತು?
ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಮದುವೆಯಲ್ಲಿ ಕೇವಲ ಆಪ್ತರು ಭಾಗಿಯಾಗಲಿದ್ದಾರೆ. ಕೆಲ ಬಾಲಿವುಡ್ ತಾರೆಗಳು ಸೇರಿದಂತೆ ಎರಡು ಕುಟುಂಬಸ್ಥರು ಮದುವೆಯಲ್ಲಿ ಹಾಜರಾಗಲಿದ್ದಾರೆ. ಒಟ್ಟಾರೆಯಾಗಿ 200ಕ್ಕಿಂತ ಕಡಿಮೆ ಜನರಿಗೆ ಮಾತ್ರ ಆಹ್ವಾನಿಸಲಾಗಿದೆ. ಮದುವೆ ವೇಳೆ ಅತಿಥಿಗಳಿಗೆ ಮೊಬೈಲ್ ಫೋನ್ ತರದಂತೆ ಕುಟುಂಬಸ್ಥರು ಷರತ್ತು ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆ ಬಳಿಕ ಜೋಡಿ ಮುಂಬೈ ಅಥವಾ ಬೆಂಗಳೂರಿನಲ್ಲಿ ವಿಶೇಷ ಔತಣಕೂಟವನ್ನು ಏರ್ಪಡಿಸಲಿದೆ.
Advertisement
ರಾಮ್‍ಲೀಲಾ ಸಿನಿಮಾ ಮೂಲಕ ತೆರೆಯ ಮೇಲೆ ಒಂದಾದ ಈ ಜೋಡಿ ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದೆ. ರಾಮ್‍ಲೀಲಾ ಚಿತ್ರದ ಬಳಿಕ ಇಬ್ಬರು ಪ್ರೇಮ ಪಾಶದಲ್ಲಿ ಸಿಲುಕಿದ್ದರು. ಆದ್ರೆ ಎಂದು ನಾವಿಬ್ಬರು ಒಳ್ಳೆಯ ಗೆಳೆಯರು ಎಂದು ಮಾತ್ರ ಈ ಜೋಡಿ ಹೇಳಿಕೊಂಡಿತ್ತು. ಮದುವೆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇತ್ತೀಚೆಗೆ ಮದುವೆ ಪೂರ್ವದ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews