ಶಾರುಖ್ ಖಾನ್ ಗೆ ಮುತ್ತಿಟ್ಟು ವೈರಲ್ ಆದ ದೀಪಿಕಾ ಪಡುಕೋಣೆ

Public TV
1 Min Read
Shah Rukh Khan Deepika Padukone 1

ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಈ ಹಿಂದೆ ಶಾರುಖ್ ಖಾನ್ (Shah Rukh Khan) ಮುತ್ತಿಟ್ಟು  (Kiss)ಸಖತ್ ಸುದ್ದಿಯಾಗಿದ್ದರು. ಇದೀಗ ಉಲ್ಟಾ ಆಗಿದೆ. ಸ್ವತಃ ದೀಪಿಕಾ ಪಡುಕೋಣೆ ಅವರೇ ಶಾರುಖ್ ಖಾನ್ ಗೆ ಕಿಸ್ ಮಾಡಿ ವೈರಲ್ ಆಗಿದ್ದಾರೆ. ಮುತ್ತಿಡುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹಂಚಿಕೆಯಾಗಿದ್ದು, ದೀಪಿಕಾಗೆ ಹಲವರು ಗಂಡನನ್ನು ನೆನಪಿಸಿದ್ದಾರೆ.

Shah Rukh Khan Deepika Padukone 2

ಶಾರುಖ್ ಖಾನ್ ಜೊತೆ ಪಠಾಣ್, ಜವಾನ್ ಸೇರಿದಂತೆ ಒಂದರ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ ದೀಪಿಕಾ ಪಡುಕೋಣೆ. ಅದರಲ್ಲೂ ಪಠಾಣ್ ಸಿನಿಮಾದ ಕೇಸರಿ ಹಾಡಿಗಾಗಿ ಈ ಜೋಡಿ ವಿವಾದಕ್ಕೆ ಕಾರಣವಾಗಿತ್ತು. ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ದೀಪಿಕಾ ಮೇಲೆ ಹಿಂದೂಪರ ಹೋರಾಟಗಾರರು ಮುಗಿಬಿದ್ದಿದ್ದರು. ಇದೀಗ ಮುತ್ತಿನ ಫೋಟೋ ಇಟ್ಟುಕೊಂಡು ಮತ್ತೊಮ್ಮೆ ಟ್ರೋಲ್ ಮಾಡಲಾಗುತ್ತಿದೆ.ಇದನ್ನೂ ಓದಿ:ಮಲ್ಲಿಕಾ ಸಿಂಗ್ ಪಾತ್ರ ಪರಿಚಯಿಸಿದ ನಿರ್ದೇಶಕ ಸಿಂಪಲ್ ಸುನಿ

shahrukh khan 2

ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರಕ್ಕೆ ನಟಿ ದೀಪಿಕಾ ಪಡುಕೋಣೆ (Deepika Padukone) ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಅತಿಥಿ ಪಾತ್ರಕ್ಕೆ ಅಷ್ಟೊಂದು ಹಣ ಕೊಟ್ಟಿದ್ದಾರಾ ಎಂದು ಅಚ್ಚರಿಯನ್ನೂ ಹಲವರು ವ್ಯಕ್ತ ಪಡಿಸಿದ್ದರು. ಆ ಪ್ರಮಾಣದಲ್ಲಿ ಸಂಭಾವನೆ (Remuneration) ಪಡೆದ ವಿಚಾರ ವೈರಲ್ ಕೂಡ ಆಗಿತ್ತು. ಈ ವಿಷಯ ದೀಪಿಕಾ ಪಡುಕೋಣೆಗೂ ತಲುಪಿದೆ.

 

ಜವಾನ್ ಸಿನಿಮಾಗಾಗಿ ದೀಪಿಕಾ ಪಡುಕೋಣೆ 15 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆಯೇ ದೀಪಿಕಾ ಆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಜವಾನ್ ಚಿತ್ರಕ್ಕಾಗಿ ತಾವು ಒಂದು ಪೈಸೆಯನ್ನೂ ಸಂಭಾವನೆ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಶಾರುಖ್ ಖಾನ್ ಅವರಿಗಾಗಿ ನಾನು ಉಚಿತವಾಗಿ ನಟಿಸಿದ್ದೇನೆ ಎಂದಿದ್ದಾರೆ. ಈ ಹಿಂದೆಯೂ ತಾವು ಹಲವು ಸಿನಿಮಾಗಳಲ್ಲಿ ಈ ರೀತಿ ಉಚಿತವಾಗಿ ನಟಿಸಿದ್ದನ್ನು ಸ್ಮರಿಸಿದ್ದಾರೆ.

Web Stories

Share This Article