ಮುಂಬೈ: ಬಾಲಿವುಡ್ ಮಸ್ತಾನಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆಗಾಗಿ ಟ್ವೀಟ್ ಮಾಡಿ, ನಮಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಪ್ರಕಾಶ್ ಪಡುಕೋಣೆ ಮಾಜಿ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ.
ಪತ್ರಕರ್ತರೊಬ್ಬರ ಟ್ವೀಟಿಗೆ ಪ್ರತಿಕ್ರಿಯೆ ನೀಡಿರುವ ಪದ್ಮಾವತಿ, ಅಪ್ಪ, ಬ್ಯಾಡ್ಮಿಂಟನ್ ಮತ್ತು ಭಾರತದ ಕ್ರೀಡಾಲೋಕಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ಶಿಸ್ತು, ಸಮರ್ಪಣೆ ಮತ್ತು ಶಿಸ್ತು ಹಲವರಿಗೆ ಸ್ಪೂರ್ತಿಯಾಗಿದೆ. ಇಷ್ಟು ವರ್ಷಗಳ ನಿಮ್ಮ ಪರಿಶ್ರಮಕ್ಕೆ ಕೃತಜ್ಞತೆಗಳು. ನಮಗೆ ನಿಮ್ಮ ಬಗ್ಗೆ ಗೌರವ ಮತ್ತು ಹೆಮ್ಮೆ ಇದೆ ಎಂದು ಭಾವನಾತ್ಮಕವಾಗಿ ಮುದ್ದಿನ ಮಗಳಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
Advertisement
Advertisement
ಇದೇ ದಿನ ಪ್ರಕಾಶ್ ಪಡುಕೋಣೆಯವರು, ಲಂಡನ್ ನಗರದ ವೆಂಬ್ಲೆ ಏರೆನಾದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡಿದ್ದರು ಎಂದು ಬರೆದು ದೀಪಿಕಾ ಅವರಿಗೆ ಪತ್ರಕರ್ತ ಟ್ಯಾಗ್ ಮಾಡಿದ್ದರು. ಈ ಟ್ವೀಟಿಗೆ ದೀಪಿಕಾ ಪ್ರತಿಕ್ರಿಯಿಸುವ ತಮ್ಮ ತಂದೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.