ಹುಟ್ಟುವ ಮಗುವಿಗಾಗಿ ದಿಟ್ಟ ನಿರ್ಧಾರ ಕೈಗೊಂಡ ದೀಪಿಕಾ ಪಡುಕೋಣೆ

Public TV
1 Min Read
DEEPIKA PADUKONE 2

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆಯೇ ‘ಕಲ್ಕಿ’ (Kalki 2898 AD) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ ಚಿತ್ರತಂಡಕ್ಕೆ ನಟಿ ಸಾಥ್ ನೀಡಿದ್ದರು. ಈಗ ಅವರ ಹೊಸದೊಂದು ಅಪ್‌ಡೇಟ್ ಸಿಕ್ಕಿದೆ. ಹುಟ್ಟುವ ಮಗುವಿಗಾಗಿ ನಟಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ:ಅಕ್ಕನ ಮದುವೆ ಸಂಭ್ರಮದಲ್ಲಿ ಮಿಂಚಿದ ಮೇಘಾ ಶೆಟ್ಟಿ

deepika padukone 2

ಅಂತರಾಷ್ಟ್ರೀಯ ವೆಬ್ ಸ್ಟೋರಿ ‘ದಿ ವೈಟ್ ಲೋಟಸ್’ ಮೂರನೇ ಸೀಸನ್ ಆಫರ್ ನಟಿ ದೀಪಿಕಾಗೆ ಸಿಕ್ಕಿತ್ತು. ಆದರೆ, ಪ್ರೆಗ್ನೆಂಟ್ ಎಂಬ ಕಾರಣಕ್ಕೆ ಅವರು ಅದನ್ನು ನಿರಾಕರಿಸಿದ್ದಾರಂತೆ. ಮಗುವನ್ನು ನೋಡಿಕೊಳ್ಳಲು ನಟಿ ಈ ಪ್ರಾಜೆಕ್ಟ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ದೀಪಿಕಾ ಯಾವುದೇ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕುತ್ತಿಲ್ಲ ಎನ್ನಲಾಗಿದೆ. ಸದ್ಯ ಈ ಸುದ್ದಿ ತಿಳಿದು ಫ್ಯಾನ್ಸ್‌ ಬೇಸರಗೊಂಡಿದ್ದಾರೆ.

deepika padukone 1 2

ದೀಪಿಕಾ ಯಾರ ಸಹಾಯವೂ ಇಲ್ಲದೆ ಮಗುವನ್ನು ನೋಡಿಕೊಳ್ಳಲು ಬಯಸಿದ್ದಾರೆ. ಅಂದರೆ ಇತರ ಸೆಲೆಬ್ರಿಟಿಗಳಂತೆ ದೀಪಿಕಾ ಮಗುವನ್ನು ನೋಡಿಕೊಳ್ಳಲು ದಾದಿಯರನ್ನು ನೇಮಿಸಿಕೊಳ್ಳುವುದಿಲ್ಲ. ಹೆರಿಗೆಯ ನಂತರ ಮಗುವಿನ ಪಾಲನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧಾರಿಸಿದ್ದಾರೆ. ಆ ನಂತರ ಮತ್ತೆ ಸಿನಿಮಾಗೆ ಬರುವ ಬಗ್ಗೆ ಆಲೋಚಿಸಲಿದ್ದಾರೆ.

ಅಂದಹಾಗೆ, ಫೆಬ್ರವರಿಯಲ್ಲಿ ತಾಯಿ ಆಗಿರೋದಾಗಿ ನಟಿ ಅನೌನ್ಸ್ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ.

Share This Article