‘ಪಠಾಣ್’ (Pathaan) ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಸಿನಿಮಾ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ. ಸಿಂಗಮ್ 3ನಲ್ಲಿ (Singham 3) ಅಜಯ್ ದೇವಗನ್‌ಗೆ (Ajay Devgn) ಸಹೋದರಿಯಾಗಿ ನಟಿಸಲು ದೀಪಿಕಾ ಸಜ್ಜಾಗಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿ ಕಾಣಿಸಿಕೊಳ್ತಿದ್ದಾರೆ.
ಶಾರುಖ್ ಜೊತೆ ‘ಪಠಾಣ್’ (Pathaan) ಸಿನಿಮಾದಲ್ಲಿ ನಟಿಸಿ ಗೆದ್ದು ಬೀಗಿದ ಮೇಲೆ ಕನ್ನಡದ ಬ್ಯೂಟಿ ದೀಪಿಕಾಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರುತ್ತಿದೆ. ನಂಬರ್ ಒನ್ ನಾಯಕಿಯಾಗಿ ಕರಾವಳಿ ಕ್ವೀನ್ ಮಿಂಚ್ತಿದ್ದಾರೆ. ಹೀಗಿರುವಾಗ ನಿರ್ಮಾಪಕ ರೋಹಿತ್ ಶೆಟ್ಟಿ ನಿರ್ಮಾಣದ ‘ಸಿಂಗಮ್ 3’ನಲ್ಲಿ ನಟಿಸಲು ದೀಪಿಕಾ ಪಡುಕೋಣೆಗೆ ಬುಲಾವ್ ಬಂದಿದೆ.
ಸಿಂಗಮ್ 3ನಲ್ಲಿ ದೀಪಿಕಾ ಲೇಡಿ ಸಿಂಗಮ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ ಕೇಳಿ ಥ್ರಿಲ್ ಆಗಿ, ಅಜಯ್ ದೇವಗನ್‌ಗೆ ಸಹೋದರಿಯಾಗಿ ಜೀವ ತುಂಬಲು ಓಕೆ ಎಂದಿದ್ದಾರೆ. 50 ದಿನಗಳ ಕಾಲ್‌ಶೀಟ್ ಕೂಡ ನೀಡಿದ್ದಾರೆ. ದೀಪಿಕಾ- ಅಜಯ್ ಇಬ್ಬರ ಪಾತ್ರಕ್ಕೂ ಬಹಳಷ್ಟು ಪ್ರಾಮುಖ್ಯತೆಯಿದ್ದು, ಭಿನ್ನ ಕಥೆಯನ್ನ ತೆರೆಯ ಮೇಲೆ ಹೇಳೋದಕ್ಕೆ ಚಿತ್ರತಂಡ ಸಜ್ಜಾಗಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.
ಸದ್ಯ ಶಾರುಖ್ ಖಾನ್ (Sharukh Khan) ಜೊತೆ ಜವಾನ್, ಹೃತಿಕ್ ರೋಷನ್ ಜೊತೆ ಫೈಟರ್, ಪ್ರಭಾಸ್ ಜೊತೆ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ದೀಪಿಕಾ ಪಡುಕೋಣೆ ಕೈಯಲ್ಲಿವೆ.