ನವದೆಹಲಿ: ಬಾಲಿವುಡ್‍ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಇತ್ತೀಚಿಗೆ ಸ್ವಿಟ್ಜರ್ಲ್ಯಾಂಡ್ ನ ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಈ ವೇದಿಕೆ ಮೇಲೆ ಪ್ರಶಸ್ತಿ ಪಡೆದ ಬಳಿಕ ದೀಪಿಕಾ ಡಿಪ್ರೆಷನ್ ಬಗ್ಗೆ ಬಿಚ್ಚಿಟ್ಟಿದ್ದಾರೆ.
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದಕ್ಕಾಗಿ ದೀಪಿಕಾ ಅವರಿಗೆ ಕ್ರಿಸ್ಟಲ್ ಅವಾರ್ಡ್ 2020 ನೀಡಿ ಗೌರವಿಸಲಾಗಿದೆ. ಸ್ಟಾರ್ ನಟಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳನ್ನು ದೀಪಿಕಾ ಮಾಡುತ್ತಾ ಬಂದಿದ್ದಾರೆ. ಖಿನ್ನತೆಗೆ ಒಳಗಾದರಿಗೆ ಸಹಾಯ ಮಾಡುವ ಉದ್ದೇಶದಿಂದ 2015ರಲ್ಲಿ ‘ಲೀವ್ ಲವ್ ಲಾಫ್’ ಸಂಸ್ಥೆಯನ್ನು ದೀಪಿಕಾ ಸ್ಥಾಪಿಸಿದ್ದಾರೆ. ಈ ಮೂಲಕ ಖಿನ್ನತೆಗೆ ಒಳಗಾದವರು ಆ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ.
Advertisement
Advertisement
ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ದೀಪಿಕಾ, ತಾವು ಖಿನ್ನತೆಗೆ ಒಳಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. 2014ರಲ್ಲಿ ಪ್ರಾರಂಭವಾದ ಖಿನ್ನತೆ ಮತ್ತು ಆತಂಕದಿಂದ ಸಾಕಷ್ಟು ಬಾರಿ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದೆ. ಆದರೆ ನನ್ನ ತಾಯಿ ನನ್ನನ್ನು ಖಿನ್ನತೆಯಿಂದ ಹೊರಗೆ ಕರೆದುಕೊಂಡು ಬಂದರು. ಖಿನ್ನತೆ ಮತ್ತು ಆತಂಕಕ್ಕೆ ಚಿಕಿತ್ಸೆ ನೀಡಲಾಗುತ್ತೆ. ನನ್ನ ಅನುಭವದ ಪ್ರಕಾರ ಸ್ವೀಕಾರವು ಚೇತರಿಕೆಯ ಮೊದಲ ಹೆಜ್ಜೆಯಾಗಿದೆ ಎಂದು ದೀಪಿಕಾ ವೇದಿಕೆ ಮೇಲೆ ಮಾತನಾಡಿದರು.
Advertisement
[Video] Deepika Padukone's acceptance speech at the Crystal Aawards, World Economic Forum 2020????????❤️ #WEF20 pic.twitter.com/xMoQx5S7lu
— Deepika Padukone FC (@DeepikaPFC) January 20, 2020
Advertisement
ತನ್ನ ಖಿನ್ನತೆಯ ಅನುಭವನ್ನು ಬಿಚ್ಚಿಡುತ್ತ ‘ಲೀವ್ ಲವ್ ಲಾಫ್’ ಫೌಂಡೇಶನ್ ಸ್ಥಾಪಿಸಿರುವ ಬಗ್ಗೆಯು ದೀಪಿಕಾ ಹೇಳಿದರು. ಖಿನ್ನತೆಯಿಂದ ಹೊರಬಂದ ನಂತರ 2015ರಲ್ಲಿ ಲೀವ್ ಲವ್ ಲಾಫ್’ ಫೌಂಡೇಶನ್ ಸ್ಥಾಪಿಸಿದೆ. ಬದಲಾವಣೆಯನ್ನು ಮಾಡುವುದು ಮತ್ತು ಕನಿಷ್ಠ ಒಂದು ಜೀವವನ್ನಾದರು ಉಳಿಸುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಿದೆ. “ನೀವು ಖಂಡಿತ ಒಬ್ಬಂಟಿಯಲ್ಲ. ಮುಖ್ಯವಾಗಿ ಭರವಸೆ ಇರಬೇಕು ಎಂದು ದೀಪಿಕಾ ಹೇಳಿದರು.
ಡಿಪ್ರೆಷನ್ ಬಗ್ಗೆ ದೀಪಿಕಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು, ಅಭಿಮಾನಿಗಳು ದೀಪಿಕಾ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕಾರ್ಯಕ್ಕೆ ಭೇಷ್ ಎಂದಿದ್ದಾರೆ.
https://www.instagram.com/p/B7jO4UfB-2J/?utm_source=ig_embed