ನವದೆಹಲಿ: ಬಾಲಿವುಡ್‌ನಲ್ಲಿ ನಟಿಸಲು ನನಗೆ ಮೊದಲ ಬಾರಿಗೆ ಆಫರ್ ಕೊಟ್ಟವರು ನಟ ಸಲ್ಮಾನ್ ಖಾನ್. ಆದರೆ ನಾನು ನಟಿಸಲು ಒಪ್ಪಲಿಲ್ಲ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ದೀಪಿಕಾ, ಬಾಲಿವುಡ್‌ನಲ್ಲಿ ನಟಿಸಲು ಮೊದಲು ನನಗೆ ಆಫರ್ ಕೊಟ್ಟವರು ಸ್ಟಾರ್ ನಟ ಸಲ್ಮಾನ್ ಖಾನ್. ಆಗ ನಾನಿನ್ನೂ ರೂಪದರ್ಶಿಯಾಗಿದ್ದೆ. ಆದರೂ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಳ್ಳಲು ಆಗ ನಾನು ಒಪ್ಪಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಿರಿಕ್ ಪ್ರಶ್ನೆಯನ್ನು ಕೇಳಿದ ಅಭಿಮಾನಿಯ ಬಾಯಿ ಮುಚ್ಚಿಸಿದ ಸಮಂತಾ
ಸಲ್ಮಾನ್ ಮತ್ತು ತಮ್ಮ ನಡುವಿನ ಸಿನಿಮಾ ಬಾಂಧವ್ಯದ ಬಗ್ಗೆ ಬಾಲಿವುಡ್ ಹಂಗಾಮದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೀಪಿಕಾ, ನಾವಿಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಸಿನಿಮಾದಲ್ಲಿ ನಟಿಸಲು ನನಗೆ ಮೊದಲ ಬಾರಿಗೆ ಅವಕಾಶ ನೀಡಲು ಮುಂದಾಗಿದ್ದ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. ಅಂತಹ ಆಫರ್ ನಿರಾಕರಿಸಿದ್ದನ್ನು ನೆನೆಸಿಕೊಂಡರೆ ಈಗಲೂ ಅಚ್ಚರಿಯಾಗುತ್ತೆ. ನಾನು ಮಾಡೆಲ್ ಆಗಿ ಗುರುತಿಸಿಕೊಂಡಿದ್ದೆ. ಅದನ್ನು ಯಾರೋ ಅವರಿಗೆ ಹೇಳಿರಬೇಕು. ಇಲ್ಲವೆ ಅವರೇ ನನ್ನ ಮಾಡೆಲಿಂಗ್ ಪ್ರವೃತ್ತಿಯನ್ನು ಗುರುತಿಸಿರಬೇಕು ಎಂದು ತಿಳಿಸಿದ್ದಾರೆ.
ಆದರೆ ಯಾವ ಸಿನಿಮಾದಲ್ಲಿ ನಟಿಸಲು ಸಲ್ಮಾನ್ ಆಫರ್ ನೀಡಿದ್ದರು ಎಂಬ ಬಗ್ಗೆ ದೀಪಿಕಾ ಗುಟ್ಟು ಬಿಟ್ಟುಕೊಟ್ಟಿಲ್ಲ. ಆಗ ನನಗೆ ಸಿನಿಮಾದಲ್ಲಿ ನಟಿಸಲು ಇಷ್ಟವಿರಲಿಲ್ಲ. ನಟಿಯಾಗಬೇಕು ಎಂದು ಕೂಡ ಬಯಸಿರಲಿಲ್ಲ. ಆದರೆ ಅದಾದ ಎರಡು ವರ್ಷಗಳ ನಂತರ ʼಓಂ ಶಾಂತಿ ಓಂʼ ಸಿನಿಮಾದಲ್ಲಿ ನಟಿಸಬೇಕಾಗಿ ಬಂತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ
ನನ್ನಲ್ಲಿ ನಟಿಸುವ ಸಾಮರ್ಥ್ಯವಿದೆ ಎಂದು ನನಗೇ ತಿಳಿದಿರಲಿಲ್ಲ. ಅಂತಹ ಸಂದರ್ಭದಲ್ಲಿ ಅವರು ನನ್ನಲ್ಲಿ ಪ್ರತಿಭೆಯನ್ನು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ.
ಸಲ್ಮಾನ್ ಮತ್ತು ದೀಪಿಕಾ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೆ ದೀಪಿಕಾ ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಬಿಗ್ ಬಾಸ್ ಶೋನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಒಮ್ಮೆ ದೀಪಿಕಾ ಕುರಿತು ಸಲ್ಮಾನ್ ಮಾತನಾಡಿ, ದೀಪಿಕಾ ದೊಡ್ಡ ತಾರೆ. ಆದ್ದರಿಂದ ನನ್ನೊಂದಿಗೆ ಚಲನಚಿತ್ರ ಮಾಡಲು ಬಯಸದಿರಬಹುದು ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಕಂಚಿನ ಕಂಠದ ಆರ್.ಜೆ ರಚನಾ ಹೃದಯಾಘಾತದಿಂದ ನಿಧನ