Bollywood

ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಾರಾ?

Published

on

Share this

ಮುಂಬೈ: ಬಾಲಿವುಡ್‍ನಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕುರಿತು ಗಾಸಿಪ್‍ಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಆದರೆ ಈ ಬಾರಿ ದೀಪ್‍ವೀರ್ ದಂಪತಿ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಸುದ್ದಿಯಾಗಿದ್ದಾರೆ.

ಹೌದು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ದೀಪ್‍ವೀರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಪರಿಣಿತಿ ಚೋಪ್ರಾ ಅವರು ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದ್ದು, ಈ ವೇಳೆ ಅಭಿಮಾನಿಯೊಬ್ಬರು ಈ ವಿಚಾರ ಹೇಳಿದ್ದಾರೆ. ರಣವೀರ್ ಸಿಂಗ್ ಪಾಪಾ ಬನ್‍ಗಯಾ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪರಿಣಿತಿ ಚೋಪ್ರಾ, ದಯವಿಟ್ಟು ಖಚಿತಪಡಿಸಿ ಎಂದು ರಣವೀರ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ರಾಖಿಗೆ ಕಚ್ಚಿದ ನಾಯಿ – ನಾನು ಅದನ್ನ ಕಚ್ತೀನಿ ಅಂದ ನಟಿ

ಪರಿಣಿತಿ ಅವರ ಪ್ರಶ್ನೆಗೆ ರಣವೀರ್ ಸಿಂಗ್ ಇನ್ನೂ ಉತ್ತರಿಸಿಲ್ಲ. ಆದರೆ ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಣವೀರ್ ಸಿಂಗ್ ಅವರೇ ಖಚಿತಪಡಿಸಬೇಕಿದೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು 2013ರಲ್ಲಿ ಡೇಟಿಂಗ್ ಆರಂಭಿಸಿ, 2018ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ವರೆಗೆ ಮಕ್ಕಳ ವಿಚಾರದಲ್ಲಿ ಈ ಜೋಡೆ ಅಷ್ಟೇನು ಸುದ್ದಿಯಾಗಿರಲಿಲ್ಲ. ಇದೀಗ ಪರಿಣಿತಿ ಚೋಪ್ರಾಗೆ ಅಭಿಮಾನಿಯೊಬ್ಬರು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಗೋಲಿಯೋನ್ ಕಿ ರಾಸ್‍ಲೀಲಾ: ರಾಮ್-ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ತೆರೆ ಹಂಚಿಕೊಂಡಿದೆ. ಹೀಗೆ ನಟನೆ ಹಾಗೂ ಖಾಸಗಿ ಜೀವನವನ್ನು ಜೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement