ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಅವರು ಶನಿವಾರ (ಸೆ.8) ಸಂಜೆ ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಡ್ಮಿಟ್ ಆಗಿದ್ದಾರೆ. ಇದನ್ನೂ ಓದಿ:ಅಮ್ಮನ ಜೊತೆ ಪೆದ್ದಮ್ಮನ ಆಶೀರ್ವಾದ ಪಡೆದ ನಟಿ ಆರಾಧನಾ
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ (Ranveer Singh) ಅವರು ತಮ್ಮ ಇತರೆ ಕುಟುಂಬ ಸದಸ್ಯರೊಟ್ಟಿಗೆ ಸೆ.7ರ ಸಂಜೆ ಆಸ್ಪತ್ರೆಗೆ ತೆರಳಿದ್ದಾರೆ. ಕಪ್ಪು ಬಣ್ಣದ ಕಾರಿನಲ್ಲಿ ನಟಿ ಆಗಮಿಸಿದ್ದಾರೆ. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಎಲ್ಲೂ ಕಾಣಿಸೋದಿಲ್ಲ. ಕಾರು ಮಾತ್ರ ಪಾಸ್ ಆಗುತ್ತದೆ.
View this post on Instagram
ದೀಪಿಕಾ ಪಡುಕೋಣೆಗೆ ಸೆ.28ಕ್ಕೆ ಡೇಟ್ ಕೊಡಲಾಗಿತ್ತು. ಆದರೆ ಸೆಪ್ಟೆಂಬರ್ 20ರ ಮೇಲೆಯೇ ದೀಪಿಕಾಗೆ ಮಗು ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದಿಢೀರ್ ಆಗಿ ದೀಪಿಕಾ ಅವರು ಆಸ್ಪತ್ರೆಗೆ ಆಗಮಿಸಿರುವುದನ್ನು ಗಮನಿಸಿದರೆ ಶೀಘ್ರವಾಗಿ ಮಗು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯದಲ್ಲೇ ಗುಡ್ ನ್ಯೂಸ್ ಕೊಡ್ತಾರಾ? ಕಾದುನೋಡಬೇಕಿದೆ.
ಇತ್ತೀಚೆಗೆ ನಟಿ ಮಸ್ತ್ ಆಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಪ್ರೆಗ್ನೆನ್ಸಿ ಮ್ಯಾಟರ್ ಸುಳ್ಳು ಎಂದವರಿಗೆ ಬಂಪ್ ತೋರಿಸಿ ಪತಿ ಜೊತೆ ಕ್ಯಾಮೆರಾಗೆ ದೀಪಿಕಾ ಪೋಸ್ ನೀಡಿದ್ದರು. ಪ್ರೆಗ್ನೆನ್ಸಿ ಫೋಟೋಶೂಟ್ ಸಖತ್ ವೈರಲ್ ಆಗಿತ್ತು.