ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ‘ಪಠಾಣ್’ ಬೆಡಗಿ

Public TV
2 Min Read
deepika padukone

‘ಪಠಾಣ್’ (Pathaan) ಸುಂದರಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಬಾಲಿವುಡ್‌ನ (Bollywood) ನಂಬರ್ ಒನ್ ನಾಯಕಿಯಾಗಿ ಮಿಂಚ್ತಿದ್ದಾರೆ. ‘ಪಠಾಣ್’ ಸೂಪರ್ ಸಕ್ಸಸ್ ನಂತರ ಮತ್ತೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ನಡುವೆ, ಫ್ಯಾಷನ್ ಶೋವೊಂದರಲ್ಲಿ ನಟಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ದೀಪು ನಯಾ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಜ್ಜಾಗುತ್ತಿದೆ. ಇದನ್ನೂ ಓದಿ:ಸಿನಿಮಾಗೆ ಗುಡ್ ಬೈ, ರಾಜಕೀಯಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ?

deepika padukone 1 1

ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು. ಬಳಿಕ ಕನ್ನಡದ ‘ಐಶ್ವರ್ಯ’ (Aishwarya) ಸಿನಿಮಾ ಮೂಲಕ ಉಪ್ಪಿಗೆ ನಾಯಕಿಯಾಗಿ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ನಂತರ ಶಾರುಖ್ ಖಾನ್ ನಟನೆಯ ‘ಓಂ ಶಾಂತಿ ಓಂ'(Om Shanti Om) ಸಿನಿಮಾದಲ್ಲಿ ಹೀರೋಯಿನ್ ಆಗಿ ಚಾನ್ಸ್ ಗಿಟ್ಟಿಸಿಕೊಂಡರು. ಅಲ್ಲಿಂದ ಶುರುವಾಯ್ತು ನೋಡಿ ದೀಪಿಕಾ ರೇಸ್, ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ನಾಯಕಿಯಾಗುವ ಮೂಲಕ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದ್ದರು.

deepika padukone 1

ಕೊರೋನಾ ನಂತರ ಬಾಲಿವುಡ್‌ನಲ್ಲಿ ಹಿಂದಿ ಸಿನಿಮಾಗಳು ಸಕ್ಸಸ್ ಕಾಣದೇ ಇರುವ ಸಂದರ್ಭದಲ್ಲಿ ಶಾರುಖ್ ಖಾನ್ ಜೊತೆ ಪಠಾಣ್‌ಗೆ ಸಾಥ್ ನೀಡಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡ್ತು. ಈಗ ಕನ್ನಡದ ಬ್ಯೂಟಿ ಬಾಲಿವುಡ್ ರಂಗವನ್ನೇ ಆಳುತ್ತಿದ್ದಾರೆ. ರಣ್‌ವೀರ್ ಸಿಂಗ್ (Ranveer Singh) ಮುದ್ದಿನ ಮಡದಿಯಾಗಿ, ನಾಯಕಿಯಾಗಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಿನಿಮಾಗೆ ಗುಡ್ ಬೈ, ರಾಜಕೀಯಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ?

deepika padukone

ಈ ನಡುವೆ ಫ್ಯಾಷನ್ ಶೋವೊಂದರಲ್ಲಿ ದೀಪಿಕಾ ಪಡುಕೋಣೆ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಡಿಸೈನರ್ ಸೀರೆಯುಟ್ಟು ಮಿರ ಮಿರ ಅಂತಾ ಬೆಂಗಳೂರಿನ ಬೆಡಗಿ ಮಿಂಚಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ.

‘ಪಠಾಣ್’ ಸಕ್ಸಸ್ ನಂತರ ಪ್ರಭಾಸ್ ಜೊತೆ ಪ್ರಾಜೆಕ್ಟ್ ಕೆ, ಹೃತಿಕ್ ರೋಷನ್‌ಗೆ ಮೊದಲ ಬಾರಿ ಹೀರೋಯಿನ್ ಆಗಿ ‘ಫೈಟರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜವಾನ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಪಠಾಣ್ ಸಕ್ಸಸ್ ನಂತರ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ.

Share This Article