ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಅಂತಾನೇ ಮಾಡಿದ ಹುನ್ನಾರ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ. ಕೆಲ ಪ್ರಗತಿಪರ ಹೋರಾಟಗಾರರ ಜೊತೆ ದೀಪಿಕಾ ಪಡುಕೋಣೆ ಗುರುತಿಸಿಕೊಂಡಿದ್ದಾರೆ ಎಂದು ಜೆಎನ್ಯು ಹೋರಾಟದಲ್ಲಿ ದೀಪಿಕಾ ಭಾಗಿಯಾಗದ್ದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಾಂತ್ ಸಂಬರಗಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬಂದಿರುವ ಪ್ರಶಾಂತ್ ಸಂಬರಗಿ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಕೇಸರಿ ಬಿಕಿನಿ ಬಗ್ಗೆ ತಕರಾರು ಎತ್ತಿದ್ದಾರೆ. ಬಾಲಿವುಡ್ ಚಿತ್ರೋದ್ಯಮ ಹಿಂದೂಗಳ ಭಾವನೆಗೆ ಹೀಗೆ ನೋವು ಮಾಡುತ್ತಿರುವುದು ಹೊಸದೇನೂ ಅಲ್ಲ, ಬಾಲಿವುಡ್ ನಟರ ಮದುವೆಗಳನ್ನು ನೋಡಿದರೆ ಲವ್ ಜಿಹಾದ್ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅವರು ಮಾತನಾಡಿದ್ದಾರೆ. ದೀಪಿಕಾ ಅವರಿಗೆ ಬೇಕು ಅಂತಾನೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಪರಪುರುಷನನ್ನು ಮನೆಗೆ ಕರೆತರುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು: ಖ್ಯಾತನಟಿ ಅಭಿನಯ ಅತ್ತಿಗೆ ಕಣ್ಣೀರು
Advertisement
Advertisement
ಪಠಾಣ್ ಸಿನಿಮಾ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡ ಪರಿ ಹಲವರ ಕೆಂಗಣ್ಣಿಗೆ ಕಾರಣವಾಗಿದೆ. ಕೇಸರಿ ಬಿಕಿನಿಯಲ್ಲಿ ದೀಪಿಕಾ ಕುಣಿದಿದ್ದಾರೆ ಎನ್ನುವುದು ಮತ್ತು ಅದು ಶಾರುಖ್ ಖಾನ್ ನಟನೆಯ ಚಿತ್ರ ಎನ್ನುವ ಕಾರಣಕ್ಕಾಗಿ ವಿವಾದ ಎದ್ದಿದೆ. ಇದರ ಬೆನ್ನಲ್ಲೆ ಪಠಾಣ್ ಸಿನಿಮಾವನ್ನು ಬೈಕಾಟ್ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಒತ್ತಾಯ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ದೀಪಿಕಾರ ಹಳೆ ಫೋಟೋವೊಂದನ್ನು ವೈರಲ್ ಮಾಡುತ್ತಿದ್ದು ಅದನ್ನೂ ಸೇರಿಸಿ ಸಿನಿಮಾ ಬೈಕಾಟ್ ಮಾಡಿ ಎಂದು ಹೇಳಲಾಗುತ್ತಿದೆ.
Advertisement
ಈ ಹಿಂದೆ 2020ರಲ್ಲಿ ಜೆಎನ್ ಯೂ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟದಲ್ಲಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು. ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ತುಕ್ಡೆ ಗ್ಯಾಂಗ್ ಜೊತೆ ದೀಪಿಕಾ ಸೇರಿದ್ದಾರೆ ಎಂದು ಕಾರಣವನ್ನಿಟ್ಟುಕೊಂಡು ಪ್ರತಿಭಟನೆ ಮಾಡಲಾಯಿತು. ಆ ಫೋಟೋವನ್ನು ಪಠಾಣ್ ಜೊತೆ ಸೇರಿಸಿ ಈ ಸಿನಿಮಾವನ್ನು ಬೈಕಾಟ್ ಮಾಡಿ ಎಂದು ಹೊಸ ಹೋರಾಟ ಶುರು ಮಾಡಿದ್ದಾರೆ.