ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ನಡೆದುಕೊಂಡ ರೀತಿ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇತ್ತೀಚೆಗೆ ದೀಪಿಕಾ ತಮ್ಮ ತಂದೆ ಪ್ರಕಾಶ್ ಪಡುಕೋಣೆ ಜೊತೆ ಮುಂಬೈ ವಿಮಾನ ನಿಲ್ದಾಣದೊಳಗೆ ಹೋಗುತ್ತಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ದೀಪಿಕಾ ಪಡುಕೋಣೆ ಅವರಿಗೆ ತಮ್ಮ ಐಡಿ ಕಾರ್ಡ್ ತೋರಿಸಲು ಹೇಳಿದ್ದಾರೆ.
ಸಿಬ್ಬಂದಿಯ ಧ್ವನಿ ಕೇಳಿ ದೀಪಿಕಾ ‘ನಿಮಗೆ ಐಡಿ ಕಾರ್ಡ್ ಬೇಕಾ’ ಎಂದು ಹೇಳಿದ್ದಾರೆ. ಅಲ್ಲದೆ ಸಿಬ್ಬಂದಿ ಬಳಿ ಬಂದು ತಮ್ಮ ಐಡಿ ಕಾರ್ಡ್ ತೋರಿಸಿದ್ದಾರೆ. ಈ ವೇಳೆ ದೀಪಿಕಾ ಬೇಸರ ಹಾಗೂ ಕೋಪ ಮಾಡಿಕೊಳ್ಳದೆ, ಅಲ್ಲದೆ ದೊಡ್ಡ ಸ್ಟಾರ್ ನಟಿ ಎಂಬ ಅಹಂಕಾರವೂ ಇಲ್ಲದೆ ಐಡಿ ಕಾರ್ಡ್ ತೋರಿಸಿದ್ದಾರೆ. ದೀಪಿಕಾ ಅವರ ಈ ನಡತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈ ವಿಡಿಯೋ ನೋಡಿ ಕೆಲವು ಅಭಿಮಾನಿಗಳು, ‘ದೀಪಿಕಾ ತುಂಬಾ ಸರಳ ವ್ಯಕ್ತಿ. ಹಾಗಾಗಿ ಜನರು ಅವರನ್ನು ಇಷ್ಟಪಡುತ್ತಾರೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದೀಪಿಕಾ ಅವರ ಈ ನಡವಳಿಕೆ ನೋಡಿ ಅವರನ್ನು ‘ಕ್ವೀನ್’ ಎಂದು ಕರೆಯುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.
ದೀಪಿಕಾ ಈಗ ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ ‘ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್ ವಾಲ್ ಜೀವನಚರಿತ್ರೆ ಆಗಿದೆ. ಇದಾದ ಬಳಿಕ ದೀಪಿಕಾ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸಲಿದ್ದಾರೆ.