ಧಾರವಾಡ: ಪಠಾಣ್ ಸಿನಿಮಾದಲ್ಲಿ (Pathan Cinema) `ಬೇಷರಂ ರಂಗ್’ ಶಾರುಖ್‌ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ (Deepika Padukone) ಹಾಟ್ ನೃತ್ಯದಿಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸಿಡಿಮಿಡಿಗೊಂಡಿದ್ದಾರೆ.
ಧಾರವಾಡದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಇತ್ತೀಚೆಗೆ ರಿಲೀಸ್ ಆಗಿರುವ ಪಠಾಣ್ ಸಿನೆಮಾದ `ಬೇಷರಂ ರಂಗ್’ ಹಾಡಿನ ನೃತ್ಯ ಅಶ್ಲೀಲ ಹಾಗೂ ಅಸಭ್ಯವಾಗಿದೆ, ಇದು ನಾಚಿಗೇಡಾಗುವಂತಹದ್ದು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ‘ಅಸಹ್ಯಕರ.. ಬಣ್ಣದ ಕುರುಡುತನ’ ಎನ್ನುತ್ತಾ ದೀಪಿಕಾ ಪರ ಬ್ಯಾಟ್ ಮಾಡಿದ ಪ್ರಕಾಶ್ ರಾಜ್
Advertisement
Advertisement
ದೇಶಾದ್ಯಂತ ಪಠಾಣ್ ಸಿನಿಮಾ ಹಾಡಿಗೆ ಬೈಕಾಟ್ ಅಭಿಯಾನ ಆರಂಭಿಸಿದ್ದು, ಶ್ರೀರಾಮಸೇನೆ (Sriramsena) ಸಹ ಬೈಕಾಟ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಹಿಂದಿ ಚಿತ್ರರಂಗ ಮುಂಬೈನ ದಾವುದ್ ಕೈಯಲ್ಲಿದೆ. ಕಮ್ಯುನಿಸ್ಟರು ಹಾಗೂ ನಾಸ್ತಿಕವಾದಿಗಳ ಹಿಡಿತದಲ್ಲಿದೆ. ಇಲ್ಲಿವರೆಗೂ ಹಿಂದೂಗಳನ್ನೇ ಟಾರ್ಗೆಟ್ ಮಾಡಿ, ನಂಬಿಕೆಗಳನ್ನು ಕೆಡಿಸುವ ಪ್ರವೃತ್ತಿ ಬೆಳೆದುಬಂದಿದೆ. ಪಠಾಣ್ ಸಿನಿಮಾದಲ್ಲೂ ಕೇಸರಿ (Saffron) ಬಣ್ಣವನ್ನು ಟಾರ್ಗಟ್ ಮಾಡಿ ಬೇಷರಂ ರಂಗ್ ಹಾಡಿನಲ್ಲಿ ಈ ಬಣ್ಣ ತರಲಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
Advertisement
Advertisement
ಈ ರೀತಿಯ ಮಾನಸಿಕತೆಯ ಚಿತ್ರಗಳಿಂದಲೇ ಲಿವಿಂಗ್ ಟುಗೆದರ್ (Live In Relationship), ಲವ್‌ಜಿಹಾದ್ (Love Jihad), ರೇಪ್, ಕಿಡ್ನ್ಯಾಪ್‌ಗಳು ಆಗುತ್ತದೆ. ಸೆನ್ಸಾರ್ ಮಂಡಳಿ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಸಮಾಜ ಹಾಳು ಮಾಡುವ ಇಂಥ ಚಲನಚಿತ್ರಗಳನ್ನ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೇಸರಿ ಬಿಕಿನಿ ವಿವಾದ: ಅಕ್ಷಯ್ ಕುಮಾರ್ ಮಾಡಿದ್ರೆ ಓಕೆನಾ? ಅಂತಿದೆ ಮತ್ತೊಂದು ಟೀಮ್
ಹಿಂದೂ ದೇವತೆಗಳನ್ನ (Hindu Gods) ಅಸಭ್ಯವಾಗಿ ತೋರಿಸುವುದು ಅವಹೇಳನ ಮಾಡುವುದು ನಡೆದುಕೊಂಡೇ ಬಂದಿದೆ. ಪಿ.ಕೆ ಸಿನಿಮಾದಲ್ಲಿ ನಮ್ಮ ದೇವರುಗಳನ್ನ ಅಸಭ್ಯವಾಗಿ ಮಾಡಿದ್ದಾರೆ. ಪಾಕಿಸ್ತಾನದ ಹುಡುಗ ಹಾಗೂ ಭಾರತದ ದೇಶದ ಹುಡುಗಿಯ ಜೊತೆ ಪ್ರೀತಿ-ಪ್ರೇಮ ತೋರಿಸ್ತಾರೆ. ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಲಾಗುತ್ತಿದೆ. ಸಿನಿಮಾದಲ್ಲಿ ಗುಂಡಾ ರೋಲ್‌ನಲ್ಲಿ ಹಿಂದೂಗಳನ್ನ ತೋರಿಸ್ತಾರೆ. ನಮ್ಮನ್ನೆ ಪ್ರಚೋದನೆ ಮಾಡ್ತಾರೆ. ನಾವು ಎಷ್ಟು ದಿನ ತಾಳ್ಮೆಯಿಂದ ಇರಬೇಕು ಎಂದು ಪ್ರಶ್ನಿಸಿದ್ದಾರೆ.
ಇನ್ನೂ ದೀಪಿಕಾ ಪಡುಕೋಣೆ ಪರ ಬ್ಯಾಟಿಂಗ್ ಮಾಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ವಿರುದ್ಧ ಮುತಾಲಿಕ್ ಗರಂ ಆಗಿದ್ದಾರೆ. ಸ್ವಾಮಿ ನಾವು ಸಹನೆ ಮಾಡಿಕೊಳ್ಳುತಿದ್ದೇವೆ. ನಾವು ಎಷ್ಟು ದಿನ ಹಿಂದೂ ವಿರೋಧಿ ನೀತಿ ಸಹಿಸಬೇಕು? ಕಳೆದ 50 ವರ್ಷಗಳಿಂದ ಇದನ್ನೆ ಮಾಡುತ್ತಾ ಬಂದಿದ್ದೀರಿ. ನಮ್ಮನ್ನೆ ಟಾರ್ಗೆಟ್ ಮಾಡಿದ್ದೀರಿ. ಮುಸ್ಲಿಮರು ಬುರ್ಕಾ ಹಾಕಿಕೊಂಡು ಕುಣಿಯಲಿ, ಕ್ರಿಶ್ಚಿಯನ್ನರು ಚರ್ಚ್ನಲ್ಲಿ ಡಾನ್ಸ್ ಮಾಡಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.