BollywoodCinemaLatestMain Post

ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಲು ಹಾರ್ಟ್ ಆರ್ಹೆತ್ಮಿಯಾ ಕಾರಣ: ಏನದು ಹಾಗೆಂದರೆ?

Advertisements

ಮಿತಾಭ್ ಬಚ್ಚನ್ ನಟನೆಯ ‘ಕೆ’ ಸಿನಿಮಾದ ಶೂಟಿಂಗ್ ಗಾಗಿ ಹೈದರಾಬಾದ್ ಗೆ ಬಂದಿಳಿದಿದ್ದಾರೆ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ. ಮೂರ್ನಾಲ್ಕು ದಿನಗಳಿಂದ ಈ ಸಿನಿಮಾದ ಶೂಟಿಂಗ್ ಸತತವಾಗಿ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಎರಡು ದಿನಗಳ ಹಿಂದೆಯಷ್ಟೇ ಹೃದಯ ಬಡಿತದಲ್ಲಿ ಏರು ಪೇರಾದ ಕಾರಣದಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದರು. ದಿಢೀರ್ ಅಂತ ದೀಪಿಕಾ ಆಸ್ಪತ್ರೆ ದಾಖಲಾಗಿದ್ದಕ್ಕೆ ಸಹಜವಾಗಿಯೇ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳು ಆತಂಕವಾಗಿತ್ತು.

ಅಷ್ಟಕ್ಕೂ ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಿಕೊಳ್ಳಲು ಕಾರಣ ಹಾರ್ಟ್ ಆರ್ಹೆತ್ಮಿಯಾ (Heart Arrhythmia) ಎನ್ನಲಾಗುತ್ತಿದೆ. ಉದ್ವೇಗಕ್ಕೆ ಒಳಗಾದಾಗ ಮತ್ತು ಆತಂಕ ಹೆಚ್ಚಾದಾಗ ಹೀಗೆ ಹೃದಯ ಬಡಿತ ಏರು ಪೇರಾಗುತ್ತದೆಯಂತೆ. ಅದು ಇನ್ನೂ ಹೆಚ್ಚಾದರೆ, ಲಘು ಹೃದಯಾಘಾತವೂ ಸಂಭವಿಸಬಹುದಂತೆ. ಹಾಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ದೀಪಿಕಾ. ಯಾವುದೋ ಒಂದು ಕಾರಣದಿಂದಾಗಿ ಆತಂಕಗೊಂಡರೆ, ಹೀಗೆ ಹೃದಯ ಬಡಿತದಲ್ಲಿ ಏರುಪೇರಾಗುವುದು ಸಹಜವಂತೆ. ಆದರೆ, ಅದನ್ನು ನಿರ್ಲಕ್ಷ್ಯ ಮಾಡಬಾರದು ಎನ್ನುತ್ತಾರೆ ವೈದ್ಯರು. ಇದನ್ನೂ ಓದಿ : ಮುಂದಿನ ಚಿತ್ರಕ್ಕಾಗಿ ತೂಕ ಇಳಿಸ್ಕೊತಿರೋ ಯಶ್- ಗಡ್ಡಕ್ಕೂ ಬೀಳಲಿದೆಯಾ ಕತ್ತರಿ?

ಅಂದು ಶೂಟಿಂಗ್ ಸ್ಪಾಟ್ ನಿಂದ ಹೈದರಾಬಾದ್ ಆಸ್ಪತ್ರೆಗೆ ದಾಖಲಾದ ದೀಪಿಕಾ, ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆದು ಮತ್ತೆ ಶೂಟಿಂಗ್ ಸ್ಪಾಟ್ ಗೆ ವಾಪಸ್ಸಾಗಿದ್ದಾರೆ. ಹಾಗಾಗಿ ಆತಂಕ ಪಡುವಂಥದ್ದು ಅವರಿಗೆ ಏನೂ ಆಗಿಲ್ಲ. ಮತ್ತೆ ಅವರು ಎಂದಿನಂತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿಯೇ ಹೆಚ್ಚು ಜನರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಹಜವಾಗಿ ಎಲ್ಲರನ್ನೂ ಆತಂಕ ಮೂಡಿತ್ತು.

Live Tv

Leave a Reply

Your email address will not be published.

Back to top button