ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ತಂಡ ರಾತ್ರೋರಾತ್ರಿ ತಲೆಕೆಡಿಸಿಕೊಂಡಿದೆ. ಎಷ್ಟೇ ಮುತುವರ್ಜಿ ತಗೆದುಕೊಂಡಿದ್ದರೂ, ಬಿಕಿನಿ ಫೋಟೋ ಲೀಕ್ ಮಾಡಿದವನ ಹುಡುಕಾಟ ನಡೆಸಿದೆ.
ಹೌದು, ಪರಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಮಹತ್ವದ ಪಾತ್ರ. ಆ ಪಾತ್ರಕ್ಕಾಗಿ ಅವರು ಬಿಕಿನಿ ತೊಟ್ಟಿದ್ದಾರೆ. ಯಾರೋ ರಸಿಕ ಆ ಫೋಟೋವನ್ನು ಸೆರೆ ಹಿಡಿದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಫೋಟೋ ಲೀಕ್ ಆಗುತ್ತಿದ್ದಂತೆಯೇ ಕೋಟ್ಯಾಂತರ ಜನರು ಅದನ್ನು ಶೇರ್ ಮಾಡಿದ್ದಾರೆ. ಹೀಗಾಗಿ ಚಿತ್ರತಂಡ ಸಖತ್ ಬೇಸರದಲ್ಲಿದೆ. ಇದನ್ನೂ ಓದಿ : ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?
ಸಿನಿಮಾದ ಫೋಟೋಗಳು, ಗೆಟಪ್ ಹಾಗೂ ಇತರ ವಿಷಯಗಳು ಆಚೆ ಹೋಗದಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮುತುವರ್ಜಿ ತಗೆದುಕೊಳ್ಳಲಾಗುತ್ತದೆ. ಕನ್ನಡದಲ್ಲೂ ಎಷ್ಟೋ ಸಿನಿಮಾಗಳ ಶೂಟಿಂಗ್ ಗೆ ಮೊಬೈಲ್ ನಿಷೇಧ ಹೇರಲಾಗಿದೆ. ಆದರೂ, ಈ ರೀತಿಯ ಘಟನೆಗಳು ನಡೆದು ಬಿಡುತ್ತವೆ.
ಪಠಾಣ್ ಸಿನಿಮಾದ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿದೆ. ಸ್ಪೇನ್ ನಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ದೀಪಿಕಾ ಪಡುಕೋಣೆ ಗಾಢ ಹಳದಿ ಬಣ್ಣದ ಬಿಕಿನಿ ತೊಟ್ಟಿದ್ದಾರೆ. ಆ ಬಿಕಿನಿಯ ಮೇಲೆ ನಿಲುವಂಗಿ ತೊಟ್ಟ ಮತ್ತು ಅದನ್ನು ಕಳಚಿದ ಫೋಟೋಗಳು ಕೂಡ ಬಹಿರಂಗವಾಗಿವೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್
ದೀಪಿಕಾ ಬಿಕಿನಿ ಹಾಕುವುದು ಹೊಸದೇನೂ ಅಲ್ಲ, ಕ್ಯಾಲಂಡರ್ ಶೂಟ್ ಗಾಗಿ ಅವರು ಬಿಕಿನಿ ಹಾಕಿದ್ದೂ ಇದೆ. ಅದೆಷ್ಟೋ ಫೋಟೋಶೂಟ್ ಗಳಲ್ಲಿ ಹಾಟ್ ಹಾಟ್ ಆಗಿ ಕಂಡದ್ದೂ ಇದೆ. ಆದರೆ, ಮದುವೆ ಆದ ನಂತರ ಇದೇ ಮೊದಲ ಬಾರಿಗೆ ಅವರು ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ನಾನಾ ರೀತಿಯಲ್ಲಿ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಹಳೆಯ ಕ್ಯಾಲೆಂಡರ್ ಫೋಟೋಶೂಟ್ ಅನ್ನು ನೆನಪಿಸಿಕೊಂಡಿದ್ದಾರೆ.