ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರು ತಮಗೆ ಮದುವೆ ಆಗಿರುವ ವಿಷಯವನ್ನೇ ಮರೆತು ಹೋಗಿದ್ದಾರೆ. ನಾನು ಮದುವೆಯಾಗಿದ್ದೇನೆ ಎಂಬ ವಿಷಯವನ್ನೇ ಮರೆತು ಹೋಗಿದ್ದೇನೆ ಎಂದು ಹೇಳಿದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಇತ್ತೀಚೆಗೆ ದೀಪಿಕಾ ಅವರ ಎನ್‍ಜಿಒ(ಸರ್ಕಾರೇತರ ಸಂಸ್ಥೆ) ‘ಲಿವ್, ಲಾಫ್, ಲವ್’ ಲೆಕ್ಚರ್ ಸೀರಿಸ್ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ ತಮ್ಮ ಬಗ್ಗೆ ಮಾತನಾಡುತ್ತಾ, “ನಾನು ಒಬ್ಬಳು ಮಗಳು, ನಾನು ಒಬ್ಬಳು ಸಹೋದರಿ, ನಾನು ಒಬ್ಬಳು ನಟಿ” ಎಂದು ಹೇಳಿ ಸುಮ್ಮನಾಗುತ್ತಾರೆ.
ದೀಪಿಕಾ ಅವರು ಮಾತು ನಿಲ್ಲಿಸುತ್ತಿದ್ದಂತೆ ಕಾರ್ಯಕ್ರಮದ ನಿರೂಪಕ ‘ಪತ್ನಿ’ ಎಂದು ಹೇಳುತ್ತಾರೆ. ನಿರೂಪಕನ ಮಾತು ಕೇಳಿ ದೀಪಿಕಾ ನಗುತ್ತಾ, “ನಾನು ಮರೆತು ಹೋದೆ. ನಾನು ಒಬ್ಬಳು ಪತ್ನಿ ಕೂಡ” ಎಂದು ಹೇಳಿದ್ದಾರೆ. ಸದ್ಯ ದೀಪಿಕಾ ಅವರು ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಈ ಕಾರ್ಯಕ್ರಮದಲ್ಲಿ ದೀಪಿಕಾ ಅವರು ಮಾನಸಿಕ ಆರೋಗ್ಯದ ಬಗ್ಗೆ ನಡೆಸಿದ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಈಗ ಈ ವಿಚಾರದ ಬಗ್ಗೆ ಮಾತುಕತೆ ಪ್ರಾರಂಭವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಇನ್ನು ಬಹಳ ದೂರ ಹೋಗಬೇಕಾಗುತ್ತದೆ ಎಂದು ಹೇಳಿದರು.
ಸದ್ಯ ದೀಪಿಕಾ, ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ `ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್‍ವಾಲ್ ಜೀವನಚರಿತ್ರೆ ಆಗಿದೆ. ಈ ಚಿತ್ರದ ನಂತರ ದೀಪಿಕಾ ಪಡುಕೊಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸುತ್ತಿದ್ದಾರೆ.