ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತನ್ನ ಪತಿ ರಣ್‍ವೀರ್ ಸಿಂಗ್‍ಗಿಂತ ಹೆಚ್ಚು ಸಂಪಾದನೆ ಮಾಡುತ್ತಾರೆ.
ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 2018ರ ಪಟ್ಟಿ ಬಿಡುಗಡೆಯಾಗಿದ್ದು, ದೀಪಿಕಾ ಪಡುಕೋಣೆ 12 ತಿಂಗಳಲ್ಲಿ ಅಂದರೆ ಸೆಪ್ಟೆಂಬರ್ 2018ರವರೆಗೂ 112.8 ಕೋಟಿ ರೂ. ಸಂಪಾದಿಸಿದ್ದು, ಅವರ ಪತಿ ರಣ್‍ವೀರ್ ಸಿಂಗ್ 54.67 ಕೋಟಿ ರೂ. ಸಂಪಾದನೆ ಮಾಡಿದ್ದಾರೆ. 112.8 ಕೋಟಿ ರೂ. ಸಂಪಾದಿಸಿ ದೀಪಿಕಾ ಟಾಪ್ 100ರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದರೆ, ರಣ್‍ವೀರ್ ಸಿಂಗ್ 84.67 ಕೋಟಿ ರೂ. ಪಡೆದು 8ನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಫೋರ್ಬ್ಸ್ ಟಾಪ್ 100 ಭಾರತೀಯ ಸೆಲೆಬ್ರಿಟಿ – ಸಲ್ಮಾನ್, ಕೊಹ್ಲಿ, ದೀಪಿಕಾ ಮೋಡಿ- ಯಾರ ಆದಾಯ ಎಷ್ಟು ಕೋಟಿ?
Advertisement
Advertisement
ಇತ್ತ ವಿರಾಟ್ ಕೊಹ್ಲಿ 228.09 ಕೋಟಿ ರೂ. ಸಂಭಾವನೆ ಪಡೆದು ಕ್ರೀಡಾಪಟುಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಅನುಷ್ಕಾ ಶರ್ಮಾ 45.83 ಕೋಟಿ ರೂ. ಆದಾಯ ಪಡೆದು 16ನೇ ಸ್ಥಾನವನ್ನು ಪಡೆದಿದ್ದಾರೆ.
Advertisement
ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ 2018ರ ಟಾಪ್ ಸೆಲೆಬ್ರಿಟಿ ಪಟ್ಟಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಂ.1 ಸ್ಥಾನ ಪಡೆದಿದ್ದು, 2ನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. 2018 ಸಾಲಿನಲ್ಲಿ ಸಲ್ಮಾನ್ ಖಾನ್ 253.25 ಕೋಟಿ ರೂ. ಆದಾಯ ಗಳಿಸಿದ್ದರೆ, ಕೊಹ್ಲಿ 228.09 ಕೋಟಿ ರೂ. ಆದಾಯದೊಂದಿಗೆ 3ನೇ ಸ್ಥಾನದಿಂದ ಈ ಬಾರಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 2017ನೇ ಸಾಲಿನಲ್ಲಿ ಕೊಹ್ಲಿ 100.72 ಕೋಟಿ ರೂ. ಗಳಿಸಿದ್ದು, ಈ ಬಾರಿ ಶೇ. 116.53 ರಷ್ಟು ಆದಾಯ ಹೆಚ್ಚಾಗಿದೆ.
Advertisement
ಉಳಿದಂತೆ ಪಟ್ಟಿಯಲ್ಲಿ ಎಂಎಸ್ ಧೋನಿ 101.77 ಕೋಟಿ ರೂ. ಆದಾಯದೊಂದಿಗೆ 5ನೇ ಸ್ಥಾನದಲ್ಲಿದ್ದು, 80 ಕೋಟಿ ರೂ. ಆದಾಯದೊಂದಿಗೆ ಸಚಿನ್ ತೆಂಡೂಲ್ಕರ್ 9ನೇ ಸ್ಥಾನದಲ್ಲಿದ್ದಾರೆ. 2018 ರ ಸಾಲಿನಲ್ಲಿ ದೇಶದ ಅತಿ ಶ್ರೀಮಂತ ಕ್ರೀಡಾಪಟುಗಳ ಪೈಕಿ ಹೆಚ್ಚಿನವರು ಕ್ರಿಕೆಟಿಗರಾಗಿದ್ದು, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv