ಬಾಲಿವುಡ್ ಪಠಾಣ್ (Pathan) ಸಿನಿಮಾ ಬಿಡುಗಡೆಯಾದ ಬಹುತೇಕ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಯ್ಕಾಟ್ ನಡುವೆಯೂ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ನಟಿ ದೀಪಿಕಾ ಪಡುಕೋಣೆ (Deepika Padukone) ಮಾರುವೇಷದಲ್ಲಿ ಚಿತ್ರಮಂದಿರಕ್ಕೆ (Theatre) ಹೋಗಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ (Shah Rukh Khan) ಕಾಂಬಿನೇಷನ್ ನ ಸಿನಿಮಾ ಪಠಾಣ್. ಈ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದರು ಎನ್ನುವ ಕಾರಣಕ್ಕಾಗಿ ವಿವಾದ ಎದ್ದಿತ್ತು. ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಹಲವರು ತಗಾದೆ ತಗೆದಿದ್ದರು. ಸೆನ್ಸಾರ್ ಮಂಡಳಿ ಕೂಡ ಮಧ್ಯ ಪ್ರವೇಶ ಮಾಡಿತ್ತು. ಆದರೂ, ಕೇಸರಿ ಬಿಕಿನಿ ತಗೆಯುವಂತಹ ಸಾಹಸವನ್ನು ಚಿತ್ರತಂಡ ಮಾಡಿಲ್ಲ. ಆದರೂ, ಸಿನಿಮಾ ಗೆದ್ದಿದೆ. ಇದನ್ನೂ ಓದಿ: `ಗಟ್ಟಿಮೇಳ’ ನಟಿ ಪ್ರಿಯಾ ಜೊತೆ ಸಿದ್ದು ಮದುವೆ ಡೇಟ್ ಫಿಕ್ಸ್
ಅಂಗರಕ್ಷಕರೊಂದಿಗೆ ದೀಪಿಕಾ ಪಡುಕೋಣೆ ಥಿಯೇಟರ್ ಗೆ ಬಂದಿದ್ದಾರೆ. ಮುಖ ಕವರ್ ಮಾಡಿಕೊಂಡು ಪ್ರೇಕ್ಷಕರ ಮಧ್ಯೆ ಸಿನಿಮಾ ನೋಡಿದ್ದಾರೆ. ಆ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ಸಿನಿಮಾ ಗೆಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಥಿಯೇಟರ್ ನಲ್ಲಿ ನೋಡುಗರು ಸಂಭ್ರಮಿಸುತ್ತಿರುವ ರೀತಿ ಕಂಡು ತುಂಬಾ ಖುಷಿಯಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಪಠಾಣ್ ಸಿನಿಮಾ ರಿಲೀಸ್ ಆಗಿ ಐದು ದಿನಗಳಾಗಿವೆ. ಬಾಕ್ಸ್ ಆಫೀಸ್ ಭರ್ತಿಯಾಗಿದೆ. ನಾಲ್ಕು ನೂರು ಕೋಟಿಗೂ ಅಧಿಕ ಹಣವನ್ನು ಅದು ಬಾಚಿದೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಹಣ ಹರಿದು ಬಂದ ಮೊದಲ ಸಿನಿಮಾ ಇದಾಗಿದೆ. ಈ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾಗಳ ಸಾಲಿಗೂ ಪಠಾಣ್ ಸೇರಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k