ಬೆಂಗ್ಳೂರಿಗರಿಗೆ ನಿರಾಸೆಯನ್ನುಂಟು ಮಾಡಿದ ದೀಪಿಕಾ

Public TV
1 Min Read
deepika

ಮುಂಬೈ: ಬಾಲಿವುಡ್ ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಬೆಂಗಳೂರಿನ ಜನತೆಗೆ ಭಾರೀ ನಿರಾಸೆಯನ್ನುಂಟು ಮಾಡಿದ್ದಾರೆ. ಬೆಂಗಳೂರಿನಲ್ಲಿಯೇ ನಡೆಯುತ್ತೆ ಎಂದು ಹೇಳಲಾಗುತ್ತಿತ್ತು. ಕೊನೆ ಕ್ಷಣದಲ್ಲಿ ಆರತಕ್ಷತೆ ಕಾರ್ಯಕ್ರಮ ಮುಂಬೈನಲ್ಲಿ ನಿಗದಿಯಾಗಿದೆ.

ಮದುವೆ ಇದೇ ತಿಂಗಳು 14 ಮತ್ತು 15ಎರಂದು ನಡೆಯಲಿದೆ. ಈಗಾಗಗಲೇ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಕುಟುಂಬಸ್ಥರು ಇಟಲಿಯ ಕೋಮೋ ನಗರಕ್ಕೆ ತೆರಳಿದ್ದಾರೆ. ಮದುವೆ ಬಳಿಕ ಆರತಕ್ಷತೆ ಕಾರ್ಯಕ್ರಮ ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತೆ ಎಂಬ ಸುದ್ದಿ ಹರಿದಾಡಿತ್ತು. ಹಾಗಾಗಿ ಬೆಂಗಳೂರಿನಲ್ಲಿರುವ ದೀಪಿಕಾ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಆರತಕ್ಷತೆ ನೋಡಬೇಕೆಂದು ಖುಷಿಯಾಗಿದ್ದರು. ಆದರೆ ನವೆಂಬರ್ 28ರಂದು ಆರತಕ್ಷತೆ ಮುಂಬೈನಲ್ಲಿ ನಡೆಯಲಿದೆ. ಈ ಸಂಬಂಧ ಅರತಕ್ಷತೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Ranveer deepika

ಮದುವೆ ಪೂರ್ವ ಶಾಸ್ತ್ರಗಳನ್ನು ಮುಗಿಸಿಕೊಂಡಿರುವ ಜೋಡಿ ಬುಧವಾರ ಸಾಂಸಾರಿಕ ಜೀವನ ಪ್ರವೇಶಿಸಲಿದ್ದಾರೆ. ರಣ್‍ವೀರ್ ಪಂಜಾಬಿ ಸಂಪ್ರದಾಯಸ್ಥ ಕುಟುಂಬದವರಾಗಿದ್ದರೆ, ದೀಪಿಕಾ ದಕ್ಷಿಣ ಭಾರತದ ಅಪ್ಪಟ ಕನ್ನಡತಿ. ಹೀಗಾಗಿ ಮದುವೆ ಕಾರ್ಯಕ್ರಮ ಎರಡು ಸಂಪ್ರದಾಯದಂತೆ ನಡೆಯಲಿದೆ. ದೀಪಿಕಾ ಮೊದಲು ಪಂಜಾಬಿ ವಧುವಿನ ಲುಕ್ ನಲ್ಲಿ ಕಾಣಿಸಿಕೊಂಡ್ರೆ, ನಂತರ ಕನ್ನಡದ ಕೊಂಕಣಿ ಸಂಪ್ರದಾಯ ಉಡುಪಿನಲ್ಲಿ ಮಿಂಚಲಿದ್ದಾರೆ.

ಸ್ಪೆಶಲ್ ಡಿಶ್:
ಮದುವೆಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ಬಗೆಯ ಆಹಾರ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಮದುವೆಯಲ್ಲಿ ಬಗೆ ಬಗೆಯ ರೈಸ್ ಡಿಶಸ್ ಜೊತೆ ಪಂಜಾಬಿ ಊಟವು ಮೆನುವಿನಲ್ಲಿದೆ. ಈ ಎಲ್ಲ ಆಹಾರದ ಜೊತೆಗೆ ಇಟಾಲಿಯನ್ ಮತ್ತು ಕಾಂಟಿನೆಟಲ್ ಆಹಾರವು ಮೆನುವಿನಲ್ಲಿ ಇರಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *