ಹೈದರಾಬಾದ್: ಬಾಲಿವುಡ್ ಸ್ಟಾರ್ ಕಪಲ್ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಂದು ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ದೀಪಿಕಾ ಹಾಗೂ ರಣ್‍ವೀರ್ ಕುಟುಂಬ ಸಮೇತ ತಿರುಪತಿಗೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಲು ಇಬ್ಬರು ನಿರ್ಧರಿಸಿದ್ದರು. ದಂಪತಿ ಮೊದಲು ತಿರುಪತಿಗೆ ಭೇಟಿ ನೀಡಿ ನಂತರ ಅಮೃತಸರ ಸ್ವರ್ಣ ಮಂದಿರದ ದರ್ಶನ ಪಡೆಯಲು ತೆರಳಿದರು.
Advertisement
Advertisement
ತಿರುಪತಿಯಲ್ಲಿ ರಣ್‍ವೀರ್ ಹಾಗೂ ದೀಪಿಕಾ ನವವಧು-ವರರಂತೆ ಮಿಂಚಿದ್ದು, ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಫೋಟೋದಲ್ಲಿ ದೀಪಿಕಾ ಸಬ್ಯಾಸಾಚಿ ವಿನ್ಯಾಸದ ಕೆಂಪು ಬಣ್ಣದ ಸೀರೆ ಉಟ್ಟು, ಆಭರಣಗಳನ್ನು ಧರಿಸಿದ್ದಾರೆ. ಇತ್ತ ರಣ್‍ವೀರ್ ಗೋಲ್ಡನ್ ಕಲರ್ ಕುರ್ತಾ ಹಾಕಿದ್ದಾರೆ.
Advertisement
ಕಳೆದ ವರ್ಷ ಎಂದರೆ ನ.14 ಹಾಗೂ 15ರಂದು ರಣ್‍ವೀರ್ ಹಾಗೂ ದೀಪಿಕಾ ಇಟಲಿಯ ಲೇಕ್ ಕೊಮೊದಲ್ಲಿ ಕೊಂಕಣಿ ಹಾಗೂ ಸಿಂಧ್ ಸಂಪ್ರದಾಯದಲ್ಲಿ ಮದುವೆಯಾಗಿದ್ದರು. ಬಳಿಕ ಇಬ್ಬರು ಬೆಂಗಳೂರು ಹಾಗೂ ಮುಂಬೈನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಆಯೋಜಿಸಿದ್ದರು.