– ‘ದುವಾ’ ಅರ್ಥ ಏನು ಗೊತ್ತಾ?
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಮೊದಲ ಬಾರಿಗೆ ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಗಳ ಫೋಟೋ ಶೇರ್ ಮಾಡಿ ಹೆಸರನ್ನು ರಿವೀಲ್ ಮಾಡಿದ್ದಾರೆ.
ಸೆ.8ರಂದು ನಟಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆದರೆ, ಪೋಟೋವನ್ನು ದೀಪಿಕಾ ದಂಪತಿ ಎಲ್ಲೂ ಹಂಚಿಕೊಂಡಿರಲಿಲ್ಲ. ಈಗ ಮಗಳ ಕಾಲಿನ ಫೋಟೋ ಶೇರ್ ಮಾಡಿದ್ದಾರೆ. ಮಗುವಿಗೆ ‘ದುವಾ’ (Dua Padukone Singh) ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ಮದುವೆಗೆ ಸಜ್ಜಾದ ‘ಲಕ್ಷ್ಮಿ ಬಾರಮ್ಮ’ ನಟಿ ಲಾವಣ್ಯ ಹಿರೇಮಠ್
View this post on Instagram
ಅದಷ್ಟೇ ಅಲ್ಲ, ದುವಾ ಹೆಸರಿನ ಅರ್ಥವನ್ನು ಅವರು ತಿಳಿಸಿದ್ದಾರೆ. ದುವಾ ಎಂದರೆ ಪ್ರಾರ್ಥನೆ ಎಂದರ್ಥವಾಗಿದೆ. ಯಾಕೆಂದರೆ ನಮ್ಮ ಪ್ರಾರ್ಥನೆಗೆ ಅವಳು ಉತ್ತರ ಎಂದು ನಟಿ ಬರೆದುಕೊಂಡಿದ್ದಾರೆ.
2015 ರಲ್ಲಿ ರಣವೀರ್ ಸಿಂಗ್ ಜೊತೆ ದೀಪಿಕಾ ಇಟಲಿಯಲ್ಲಿ ಹಸೆಮಣೆ ಏರಿದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಇದನ್ನೂ ಓದಿ: ಹೇಮಾ ಚೌಧರಿ, ನರಸಿಂಹಮೂರ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ