ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮಹಿಳೆಯರ ವಾಶ್ರೂಮ್ಗೆ ಹೋಗುವ ಬದಲಾಗಿ ಪುರುಷರ ಟಾಯ್ಲೆಟ್ಗೆ ಹೋಗಿದ್ದ ವಿಚಿತ್ರ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಗೆಹರಾಯಿಯಾ ಚಿತ್ರದ ಪ್ರಚಾರದ ವೇಳೆ ಮಾಧ್ಯಮಗಳಿಗೆ ದೀಪಿಕಾ ಪಡುಕೋಣೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಸಾಕಷ್ಟು ಅಚ್ಚರಿಯ ವಿಚಾರಗಳನ್ನು ಅವರು ಬಿಚ್ಚಿಡುತ್ತಿದ್ದಾರೆ. ಬರ್ಲಿನ್ನಲ್ಲಿ ಪುರುಷರ ಟಾಯ್ಲೆಟ್ಗೆ ಹೋಗಿದ್ದ ವಿಚಿತ್ರ ಘಟನೆ ಬಗ್ಗೆ ದೀಪಿಕಾ ಈಗ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜಾನ್ವಿ, ನನ್ನ ಮಧ್ಯೆ ಹಲವು ಅಂಶ ಒಂದೇ ರೀತಿ ಇದ್ದರೂ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ: ಸಾರಾ
ಸಂದರ್ಶನದ ವೇಳೆ ದೀಪಿಕಾಗೆ ಪ್ರಶ್ನೆ ಒಂದು ಎದುರಾಯಿತು. ಗರ್ಲ್ಸ್ ಟಾಯ್ಲೆಟ್ ಕ್ಲೋಸ್ ಆಗಿರುತ್ತದೆ. ಆಗ ಬಾಯ್ಸ್ ಟಾಯ್ಲೆಟ್ ಬಳಸುತ್ತೀರಾ? ಎಂದು ಕೇಳಲಾಯಿತು. ಇದಕ್ಕೆ ಮೊದಲು ಉತ್ತರಿಸಿದ ಅನನ್ಯಾ ಪಾಂಡೆ, ಸ್ವಚ್ಛವಾಗಿದ್ದರೆ ನಾನು ಹುಡುಗರ ಶೌಚಾಲಯ ಬಳಕೆ ಮಾಡುತ್ತೇನೆ ಎಂದರು. ಈ ವೇಳೆ ಮಾತನಾಡಿದ ಸಿದ್ಧಾಂತ್ ನೂರಕ್ಕೆ ನೂರು ಹೇಳುತ್ತೇನೆ, ದೀಪಿಕಾ ಆ ಕೆಲಸ ಮಾಡುವುದಿಲ್ಲ ಎಂದರು.
ನಾನು ಬಾಯ್ಸ್ ಟಾಯ್ಲೆಟ್ ಬಳಸುತ್ತೇನೆ. ಈ ಮೊದಲು ಕೂಡ ಆ ರೀತಿ ಮಾಡಿದ್ದೇನೆ. ನಾನು ಮತ್ತು ಆಲಿಯಾ ಗರ್ಲ್ಸ್ ಟಾಯ್ಲೆಟ್ಗೆ ಹೋದೆವು. ಆದರೆ ಉದ್ದನೆಯ ಸಾಲು ಇತ್ತು. ಹೀಗಾಗಿ ಪುರುಷರ ಶೌಚಾಲಯಕ್ಕೆ ಹೋಗಿದ್ದೆವು. ನನಗೆ ಶೌಚಾಲಯ ಬಳಸುವ ಸಂದರ್ಭ ಬಂದರೆ ಎಲ್ಲಾದರೂ ಸರಿ ನಾನು ಅದನ್ನು ಬಳಸುತ್ತೇನೆ. ಸ್ವಚ್ಛತೆ ಅಲ್ಲಿ ಮುಖ್ಯವಾಗುತ್ತದೆ ಎಂದಿದ್ದಾರೆ. ದೀಪಿಕಾ ಈ ಉತ್ತರನ್ನು ಕೇಳಿದವರಿಗೆ ಅಚ್ಚರಿಯಾಗಿದೆ.