ಕಪ್ಪು ಬಿಳಿ ಬಣ್ಣದ ಬಿಕಿನಿ ಧರಿಸಿ ವಿಚಿತ್ರ ಕ್ಯಾಪ್ಷನ್ ಕೊಟ್ಟ ದೀಪಿಕಾ

Public TV
1 Min Read
Deepika Padukone 3

ಬಾಲಿವುಡ್ (Bollywood) ನಟಿ, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಕಪ್ಪು ಬಿಳಿ ಬಣ್ಣದ ಬಿಕಿನಿ ಧರಿಸಿದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಫೋಟೋದ ಜೊತೆಗೆ ವಿಚಿತ್ರವಾಗಿರುವಂತಹ ಕ್ಯಾಪ್ಷನ್ ಬೇರೆ ಕೊಟ್ಟಿದ್ದಾರೆ. ಆ ಫೋಟೋ ಮತ್ತು ಬಿಕಿನಿ (Bikini) ಕಂಡ ನೆಟ್ಟಿಗರು ದೀಪಿಕಾ ಪತಿ ರಣವೀರ್ ಸಿಂಗ್ ನ ಕಾಲೆಳೆದಿದ್ದಾರೆ.

deepika padukone 1

ಬಿಕಿನಿ ಫೋಟೋದ ಜೊತೆಗೆ ‘ಒಂದಾನೊಂದು ಕಾಲದಲ್ಲಿ, ತುಂಬಾ ಹಿಂದೇನೂ ಅಲ್ಲ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಮತ್ತು ಬರಹ ಕಂಡು ಸ್ವತಃ ರಣವೀರ್ ಸಿಂಗ್ (Ranveer Singh) ಕಾಮೆಂಟ್ ಮಾಡಿದ್ದಾರೆ. ಸಣ್ಣದೊಂದು ಎಚ್ಚರಿಕೆ ಕೊಡಬಹುದಿತ್ತು ಎಂದು ಅವರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:‘ಜೈಲರ್’ಗೆ ಸೆನ್ಸಾರ್ ಕಟ್, ರಜನಿ-ಶಿವಣ್ಣ ಸೀನ್‌ಗೆ ಬಿತ್ತಾ ಕತ್ತರಿ?

Deepika Padukone

ದೀಪಿಕಾ ಪಡುಕೋಣೆ ಈ ಹಿಂದೆ ಶಾರುಖ್ ಖಾನ್ ನಟನೆಯ ಸಿನಿಮಾದಲ್ಲೂ ಕೇಸರಿ ಬಿಕಿನಿ ಧರಿಸಿದ್ದರು. ಆ ಸಿನಿಮಾದ ಹಾಡು ವಿವಾದಕ್ಕೆ ಕಾರಣವಾಗಿತ್ತು. ಬಿಕಿನಿ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಕೂಡ ಮಾಡಲಾಯಿತ್ತು. ಆನಂತರ ಮತ್ತೆ ಇದೀಗ ಬಿಕಿನಿ ಧರಿಸಿದ ಫೋಟೋವನ್ನು ಶೇರ್ ಮಾಡಿದ್ದಾರೆ.

 

ಬೆತ್ತಲೆಯ ಫೋಟೋಶೂಟ್ ಮಾಡಿಸಿಕೊಂಡು ಈ ಹಿಂದೆ ದೀಪಿಕಾ ಪತಿ ರಣವೀರ್ ಸಿಂಗ್  ಕೂಡ ವಿವಾದಕ್ಕೆ ಕಾರಣವಾಗಿದ್ದರು. ಅವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆ ಫೋಟೋಗಳ ಬಗ್ಗೆ ಪರ ವಿರೋಧದ ಮಾತು ಕೂಡ ಕೇಳಿ ಬಂದಿತ್ತು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article