ಬಿಗ್ ಬಾಸ್ (Bigg Boss Kannada) ಬೆಡಗಿ ದೀಪಿಕಾ ದಾಸ್ (Deepika Das) ಅವರು ಮೈಸೂರು ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ತಾಯಿ ದರ್ಶನ ಪಡೆದು ಭಕ್ತಿ ಬೇಡಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಲವ್ ಅಗೇನ್’ ಎನ್ನುತ್ತಾ ಪತಿಯ ಎದುರಲ್ಲೇ ಪ್ರಿಯಾಂಕಾ ಬೇರೆ ನಟನ ಜೊತೆ ಕಿಸ್
ನಾಗಿಣಿ, ಬಿಗ್ ಬಾಸ್ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಚೆಲುವೆ ದೀಪಿಕಾ ದಾಸ್ ಅವರು ಫೀಮೇಲ್ ಓರಿಯೆಂಟೆಡ್ ಸಿನಿಮಾ ಮೂಲಕ ಬರುತ್ತಿದ್ದಾರೆ. ಪಾಯಲ್ ಪಾತ್ರಧಾರಿಯಾಗಿ ಭಿನ್ನ ಕಥೆ ಹೇಳಲು ರೆಡಿಯಾಗಿದ್ದಾರೆ. ‘ಅಂತರಪಟ’ (Antarapata) ಸೀರಿಯಲ್ ಅತಿಥಿಯಾಗಿ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ.
View this post on Instagram
ಶೂಟಿಂಗ್‌ಗೆ ಕೊಂಚ ಬ್ರೇಕ್ ಹಾಕಿ, ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ದೀಪಿಕಾ ದಾಸ್ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ. ಬಿಳಿ ಬಣ್ಣದ ಪ್ಯಾಂಟ್- ಹಳದಿ ಬಣ್ಣದ ಶಾರ್ಟ್ ಟಾಪ್‌ನ ನಟಿ ಧರಿಸಿದ್ದಾರೆ. ಕಣ್ಣಿಗೆ ಚಸ್ಮಾ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಸೀರಿಯಲ್- ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ದೀಪಿಕಾ ದಾಸ್, ಅವರ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.