ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ದೀಪಿಕಾ ದಾಸ್ ಅವರು ಶೈನ್ ಶೆಟ್ಟಿ ಮೇಲೆ ಮುನಿಸಿಕೊಂಡಿದ್ದಾರೆ.
ತಾವು ಕೊಟ್ಟಿದ್ದ ಉಡುಗೊರೆಯನ್ನು ಶೈನ್ ಜೋಪಾನವಾಗಿ ನೋಡಿಕೊಂಡಿಲ್ಲ ಎಂದು ದೀಪಿಕಾ ಬೇಸರ ಮಾಡಿಕೊಂಡಿದ್ದಾರೆ. ಹರೀಶ್ ರಾಜ್, ಕುರಿ ಪ್ರತಾಪ್ ಮತ್ತು ಕಿಶನ್ ಎಲ್ಲರೂ ಒಟ್ಟಾಗಿ ಕುಳಿತುಕೊಂಡು ಬಟ್ಟೆ ಸರಿಯಾಗಿ ಜೋಡಿಸಿಲ್ಲ ಎಂದು ಪ್ರಿಯಾಂಕಾರನ್ನು ಬೈಯುತ್ತಿದ್ದರು. ಆಗ ದೀಪಿಕಾಗೆ ತಾವು ಶೈನ್‍ಗೆ ಕೊಟ್ಟಿದ್ದ ಕಡಗ ಸಿಕ್ಕಿದೆ. ಅದನ್ನು ನೋಡಿದ ತಕ್ಷಣ ದೀಪಿಕಾ, ಇದನ್ನು ನಾನು ನಿಮಗೆ ಕೊಟ್ಟರೆ ಇಲ್ಲಿ ತಂದು ಬಿಸಾಡಿದ್ದೀರಾ ಎಂದು ಹೇಳಿ ಮುನಿಸಿಕೊಂಡಿದ್ದಾರೆ.
Advertisement
Advertisement
ಆಗ ಶೈನ್, ಅದು ನನ್ನ ಫೇವರೆಟ್ ನಾನು ಬಿಸಾಡಿಲ್ಲ. ನನ್ನ ಪಕ್ಕದಲ್ಲಿಯೇ ಇಟ್ಟುಕೊಂಡಿದ್ದೆ. ಆದರೆ ಅದು ಹೇಗೆ ಇಲ್ಲಿಗೆ ಬಂದು ಗೊತ್ತಿಲ್ಲ ಎಂದು ದೀಪಿಕಾರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಈ ವೇಳೆ ದೀಪಿಕಾ ಅಡುಗೆ ಮನೆಗೆ ಹೋಗಿ ನೀರು ಕುಡಿಯುತ್ತಿದ್ದರು. ಆಗ ದೀಪಿಕಾರನ್ನು ಶೈನ್ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ.
Advertisement
Advertisement
ದೀಪಿಕಾ ಕ್ಯಾಪ್ಟನ್ ರೂಮಿಗೆ ಹೋಗಬಹುದೆ ಎಂದು ಶೈನ್ ಬಳಿ ಅನುಮತಿ ಕೇಳಿದ್ದಾರೆ. ಆಗ ಶೈನ್ ಕ್ಯಾಪ್ಟನ್ ರೂಮಿಗೆ ಹೋಗಲು ಅನುಮತಿ ಕೇಳಬಾರದು. ಯಾರು ಬೇಕಾದರೂ ಹೋಗಬಹುದು ಎಂದು ಹೇಳಿದ್ದಾರೆ. ಅದಕ್ಕೆ ದೀಪಿಕಾ, ಬೇರೆ ಅವರ ರೂಮ್ ಎಂದರೆ ನಾವು ಅನುಮತಿ ಕೇಳುತ್ತೇವೆ. ಅದನ್ನು ನಿರ್ಲಕ್ಷ್ಯ ಮಾಡಲ್ಲ, ಉಡಾಫೆ ತೋರಲ್ಲ, ಜೊತೆಗೆ ಅದಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ ಎಂದು ಪರೋಕ್ಷವಾಗಿ ತಾವು ನೀಡಿದ್ದ ಉಡುಗೊರೆಯನ್ನು ಬೇಜವಾಬ್ದಾರಿಯಿಂದ ಬಿಸಾಡಿದ್ದಕ್ಕೆ ಶೈನ್ ಮೇಲೆ ಬೇಸರ ಮಾಡಿಕೊಂಡು ಮಾತನಾಡಿದ್ದಾರೆ.