Bengaluru CityCinemaDistrictsKarnatakaLatestMain PostSandalwood

ರಗಡ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟ ದೀಪಿಕಾ ದಾಸ್

ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ಸ್ಫರ್ಧಿ ಹಾಗೂ ನಟಿ ದೀಪಿಕಾ ದಾಸ್ ಜಾಹೀರಾತುವೊಂದಕ್ಕೆ ಫೋಟೋ ಶೂಟ್ ಮಾಡಿಸಿದ್ದು, ಫೋಟೋದಲ್ಲಿ ದೀಪಿಕಾ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

deepika das

ಕನ್ನಡ ಕಿರುತೆರೆ ನಾಗಿಣಿ ಧಾರವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ತಮ್ಮ ಗ್ಲಾಮರ್ ಲುಕ್ ಮೂಲಕವೇ ಪ್ರೇಕ್ಷಕರ ಮನ ಕದ್ದಿದ್ದ ಚೆಲುವೆ ದೀಪಿಕಾ ದಾಸ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಸದಾ ಸ್ಕ್ರೀನ್ ಮುಂದೆ ಕ್ಯೂಟ್, ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ದೀಪಿಕಾ ದಾಸ್ ಮೊದಲ ಬಾರಿಗೆ ಬಾಕ್ಸಿಂಗ್ ಗ್ಲಾವ್ಸ್ ತೊಟ್ಟು ಬಾಕ್ಸಿಂಗ್ ಫೋಟೋಗೆ ಪೋಸ್ ನೀಡಿದ್ದಾರೆ. ಮತ್ತೊಂದರಲ್ಲಿ ಟೆನ್ನೆಸ್ ಬ್ಯಾಟ್ ಹಿಡಿದು ಟೇಬಲ್ ಟೆನ್ನಿಸ್ ಆಡುತ್ತಿರುವಂತೆ ಫೋಟೋಗೆ ಖಡಕ್ ಆಗಿ ಪೋಸ್ ನೀಡಿದ್ದಾರೆ.

 

View this post on Instagram

 

A post shared by Deepika Das (@deepika__das)

ಸದ್ಯ ಈ ಫೋಟೋಗಳನ್ನು ದೀಪಿಕಾ ದಾಸ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಯಶಸ್ಸನ್ನು ಯಾರು ನೀಡಲು ಆಗುವುದಿಲ್ಲ. ಅದನ್ನು ಟ್ರ್ಯಾಕ್, ಫೀಲ್ಡ್‌ನಲ್ಲಿ ರಕ್ತ, ಬೆವರು ಮತ್ತು ಕಣ್ಣೀರು ಸುರಿಸಿ ಸಂಪಾದಿಸಬೇಕು. ಎಂದಿಗೂ ಬಿಟ್ಟು ಕೊಡಬೇಡಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯ ಗೌಡ

 

View this post on Instagram

 

A post shared by Deepika Das (@deepika__das)

ಬಿಗ್‍ಬಾಸ್ ಸೀಸನ್-7ರಲ್ಲಿ ದೀಪಿಕಾ ದಾಸ್ ಪ್ರೇಕ್ಷಕರ ಫೇವರೆಟ್ ಕಂಟೆಸ್ಟೆಂಟ್ ಆಗಿದ್ದರು. ಜೊತೆಗೆ ದೊಡ್ಮನೆಯಲ್ಲಿ ಹೆಚ್ಚಾಗಿ ಶೈನ್ ಶೆಟ್ಟಿ ಜೊತೆಗೆ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಮತ್ತು ಶೈನ್ ಶೆಟ್ಟಿಯ ಕಾಂಬಿನೇಷನ್ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದನ್ನೂ ಓದಿ: 

Leave a Reply

Your email address will not be published.

Back to top button