ಜನವರಿಯಲ್ಲಿ ತೆರೆಕಂಡ ‘#ಪಾರುಪಾರ್ವತಿ’ (Paru Parvathy) ಚಿತ್ರ ಕರ್ನಾಟಕ, ಯುಕೆ ಮತ್ತು ಐರ್ಲೆಂಡ್‌ನ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಯಶಸ್ಸಿ ಪ್ರದರ್ಶನ ಕಂಡಿದೆ. ಅಲ್ಲಿಗೆ ವರ್ಷದ ಮೊದಲ ಸಿನಿಮಾದಲ್ಲಿ ಗೆದ್ದು, ಗೆಲುವಿನ ನಗೆ ಬೀರಿದ್ದಾರೆ ನಟ ದೀಪಿಕಾ ದಾಸ್. ಇದು ಮತ್ತಷ್ಟು ಸಿನಿಮಾಗಳನ್ನು ಮಾಡಲು ಸ್ಪೂರ್ತಿ ನೀಡಿದೆ ಎಂದಿದ್ದಾರೆ.
ಈ ಚಿತ್ರದಲ್ಲಿ ಜನಪ್ರಿಯ ಟೆಲಿವಿಷನ್ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ (Deepika Das) ಟ್ರಾವೆಲಿಂಗ್ ಇನ್ಫ್ಲುಯೆನ್ಸರ್ ಆಗಿ ಹಿರಿಯ ನಟಿ ಪೂನಂ ಸಿರ್ನಾಯಕ್ ಅವರೊಂದಿಗೆ ನಟಿಸಿದ್ದಾರೆ. ಹೊಸಬರಾದ ಫವಾಜ್ ಅಶ್ರಫ್ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
- Advertisement
- Advertisement
ಉತ್ತಮ ಆರಂಭದ ನಂತರ, ಮೊದಲ ವಾರದಲ್ಲಿ ₹80 ಲಕ್ಷಗಳ ಗಳಿಕೆ ಕಂಡರೂ, ಸೀಮಿತ ಸಂಖ್ಯೆಯ ಚಿತ್ರಮಂದಿರಗಳು ಮತ್ತು ಅನಾನುಕೂಲಕರ ಪ್ರದರ್ಶನ ಸಮಯಗಳಿಂದಾಗಿ ಚಿತ್ರದ ವ್ಯಾಪ್ತಿ ಸೀಮಿತವಾಗಿದೆ.
ಪ್ರಸ್ತುತ, ಈ ಚಿತ್ರ ತನ್ನ ಎರಡನೇ ವಾರದಲ್ಲಿದೆ. ಚಿತ್ರವನ್ನು ನೋಡಿದ ವೀಕ್ಷಕರು ಛಾಯಾಗ್ರಹಣ, ಸಂಗೀತ ಮತ್ತು ನಿರ್ದೇಶನವನ್ನು ಹೊಗಳಿದ್ದಾರೆ ಮತ್ತು ಇದು ಕುಟುಂಬ ಸಮೇತ ನೋಡಬಹುದಾದ ಚಿತ್ರ ಮತ್ತು ಯುವ ಪೀಳಿಗೆಗೆ ಮನೋರಂಜನಯುಕ್ತ ಚಿತ್ರವೆಂದು ಶ್ಲಾಘಿಸಿದ್ದಾರೆ. #ಪಾರುಪಾರ್ವತಿ ಚಿತ್ರವನ್ನು Eighteen Thirty-Six Pictures ನಿರ್ಮಾಣ ಮಾಡಿದ್ದು, ಪಿಬಿ ಪ್ರೇಮನಾಥ್ ನಿರ್ಮಾಪಕರಾಗಿದ್ದಾರೆ ಮತ್ತು ರೋಹಿತ್ ಕೀರ್ತಿ ಈ ಚಿತ್ರದ ನಿರ್ದೇಶಕರಾಗಿದ್ದಾರೆ.