ಎಲ್ಲೆಡೆಯೂ ದೀಪಾವಳಿ ಸಂಭ್ರಮ ಮನೆಮಾಡಿದೆ. ಇದು ಕೇವಲ ಹಬ್ಬವಲ್ಲ. ಬೆಳಕು, ನಗು ಮತ್ತು ಸಮೃದ್ಧಿಯ ಆಚರಣೆ. ನಿಮ್ಮ ಪ್ರೀತಿಯನ್ನು ಇನ್ನೊಬ್ಬರಿಗೆ ಹಂಚುತ್ತಾ ಪ್ರೀತಿಯ ಬೆಳಕನ್ನು ಪಸರಿಸುವುದು ಈ ಹಬ್ಬದ ಉದ್ದೇಶ. ಈ ಶುಭ ಸಂದರ್ಭದಲ್ಲಿ ನಿಮ್ಮ ನೆಚ್ಚಿನವರಿಗೆ ನಿಮ್ಮ ಪ್ರೀತಿಯ ಬೆಳಕನ್ನು ನೀಡಿ, ಅವರ ಮನ-ಮನೆ ಬೆಳಗುವಂತೆ ಮಾಡಿ.
ಹಿಂದಿನ ಕಾಲದಲ್ಲಿ ಹಬ್ಬದ ಸಂದರ್ಭದಲ್ಲಿ ಸಿಹಿತಿನಿಸುಗಳನ್ನು ನೀಡುವ ಮೂಲಕ ತಮ್ಮ ಪ್ರೀತಿ, ಕೃತಜ್ಞತಾ ಭಾವವನ್ನು ತೋರ್ಪಡಿಸುತ್ತಿದ್ದರು. ಆದರೆ ಇದೀಗ ಸಿಹಿತಿನಿಸುಗಳನ್ನು ನೀಡುವುದಕ್ಕಿಂತ ಹೆಚ್ಚಾಗಿ ಉಡುಗೊರೆಗಳನ್ನು ನೀಡುವುದು ಒಂದು ಆಚರಣೆಯಾಗಿ ಬೆಳೆದುಬಿಟ್ಟಿದೆ. ನೀಡುವ ಉಡುಗೊರೆಗಳು ಅರ್ಥಪೂರ್ಣವಾಗಿ, ವಿಶೇಷವಾಗಿರಬೇಕು ಎನ್ನುವುದು ಎಲ್ಲರ ಆಸೆಯಾಗಿದೆ.
ಉಡುಗೊರೆ ನೀಡುವುದು ಸುಲಭ. ಆದರೆ ದೀಪಾವಳಿಗೆ ಯಾವ ಉಡುಗೊರೆ ನೀಡಬೇಕು ಎನ್ನುವುದು ದೊಡ್ಡ ಪ್ರಶ್ನೆಯಾಗಿ ಉಳಿದುಬಿಡುತ್ತದೆ. ಹೀಗಾಗಿ ನಿಮ್ಮ ನೆಚ್ಚಿನವರಿಗೆ ಇಷ್ಟವಾಗುವ ಹಾಗೂ ವಿಶೇಷವಾಗಿಯೂ ಎನ್ನಿಸುವ ಈ ಕೆಲವು ಉಡುಗೊರೆಗಳನ್ನು ನೀಡಿ. ಈ ದೀಪಾವಳಿಯನ್ನು ಸಂಭ್ರಮಿಸಿ.
ಗೃಹಾಲಂಕಾರ ವಸ್ತುಗಳು:
ದೀಪಾವಳಿ ಎಂದರೆ ಮನೆ ಬೆಳಗಿಸುವ ದೀಪಗಳ ಹಬ್ಬ. ಈ ಸಂದರ್ಭದಲ್ಲಿ ಮನೆಯ ಸೌಂದರ್ಯ ಹೆಚ್ಚಿಸುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿ. ಅಲಂಕಾರಿಕ ದೀಪಗಳು, ಮೇಣದ ಬತ್ತಿಗಳು, ಗೋಡೆಯ ಮೇಲಿನ ಚಿತ್ರಣಗಳು ಮತ್ತು ಶೋಕೇಸ್ ಸಾಮಗ್ರಿಗಳು ಮನೆಯ ಅಂದವನ್ನು ದ್ವಿಗುಣಗೊಳಿಸುತ್ತವೆ. ಜೊತೆಗೆ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲ್ಪಟ್ಟ ವಸ್ತುಗಳನ್ನು ನೀಡಬಹುದು.
ಕಸ್ಟಮೈಸ್ ಮಾಡಿದ ಉಡುಗೊರೆಗಳು:
ನಿಮ್ಮ ಪ್ರೀತಿಪಾತ್ರರಿಗಾಗಿ ಕೆಲವು ಕಸ್ಟಮೈಸ್ ಮಾಡಿದ ಉಡುಗೊರೆಗಳನ್ನು ನೀಡಿ. ಕಸ್ಟಮೈಸ್ ಎಂದರೆ ಅವರ ಫೋಟೋ ಇರುವ ಫ್ರೇಮ್, ನಾಮಫಲಕ, ಫೋಟೋ ಇರುವ ದಿಂಬು ಅಥವಾ ಕ್ಯಾಲೆಂಡರ್ ಇವುಗಳು ಹೆಚ್ಚು ಆಕರ್ಷಣೀಯವಾಗಿರುತ್ತದೆ. ಅಲ್ಲದೇ ಈ ಉಡುಗೊರೆಗಳೊಂದಿಗೆ ಹೆಚ್ಚು ಭಾವನಾತ್ಮಕ ಸಂಬಂಧ ಬೆಳೆಯುತ್ತದೆ.
ಸ್ವಆರೈಕೆ ಮಾಡುವ ವಸ್ತುಗಳು:
ಕೆಲವೊಮ್ಮೆ ಸ್ವಆರೈಕೆ ವಸ್ತುಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಪ್ರೀತಿಯಿಂದ ಕೆಲವು ಆರೋಗ್ಯಕ್ಕೆ ಒಳ್ಳೆಯದಾಗುವ ಕೆಲವು ವಸ್ತುಗಳನ್ನು ನೀಡಿ. ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಡ್ರೈಫ್ರೂಟ್ಸ್ ಹ್ಯಾಂಪರ್‌ಗಳನ್ನು ನೀಡಬಹುದು.
ಬಟ್ಟೆಗಳು:
ದೀಪಾವಳಿ ಹಬ್ಬಕ್ಕಾಗಿ ಬಟ್ಟೆ ಕೊಡಿಸುವುದು ಇನ್ನೊಂದು ರೀತಿಯ ಉಡುಗೊರೆ. ಬಟ್ಟೆಯೊಂದಿಗೆ ನಮ್ಮ ಅಂದವನ್ನು ಹೆಚ್ಚಿಸುವ ಕರಕುಶಲ ಆಭರಣಗಳು, ಕೈಚೀಲಗಳು ಅಥವಾ ಕೈಗಡಿಯಾರಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ.
ಪರಿಸರ ಸ್ನೇಹಿ ಉಡುಗೊರೆಗಳು
ಇನ್ನೂ ಕೆಲವರು ಪರಿಸರ ಸ್ನೇಹಿ ವಸ್ತುಗಳನ್ನು ಇಷ್ಟಪಡುತ್ತಾರೆ. ಸಸಿಗಳು, ಅಲಂಕಾರಿಕ ವಸ್ತುಗಳು ಮತ್ತು ಅಡುಗೆಮನೆ ವಸ್ತುಗಳು, ಮಡಕೆಯಂತಹ ಅಲಂಕಾರಿಕ ವಸ್ತುಗಳನ್ನು ನೀಡಬಹುದು. ಇವುಗಳು ಆನಂದವನ್ನು ನೀಡುವುದರ ಜೊತೆಗೆ ಪರಿಸರ ಸ್ನೇಹಿಯಾಗಿಯೂ ಇರುತ್ತದೆ.
ಸಿಹಿತಿಂಡಿ, ಚಾಕ್‌ಲೇಟ್‌ಗಳು:
ಹಬ್ಬದ ಸಂದರ್ಭದಲ್ಲಿ ಎಲ್ಲರೂ ಸಿಹಿ ತಿನ್ನಲು ಇಷ್ಟಪಡುತ್ತಾರೆ. ಹೀಗಾಗಿ ನಿಮ್ಮ ಪ್ರೀತಿಪಾತ್ರರಿಗೆ ಸಿಹಿತಿಂಡಿ ಹಾಗೂ ಚಾಕ್‌ಲೇಟ್ ಬಾಕ್ಸ್ಗಳು ನೀಡಿ, ಲಡ್ಡು, ಕಾಜು ಕಟ್ಲೆಟ್, ಬರ್ಫಿ ಸೇರಿದಂತೆ ಇನ್ನಿತರ ಸಿಹಿತಿಂಡಿಗಳನ್ನು ನೀಡಬಹುದು. ಕಸ್ಟಮೈಸ್ ಮಾಡಿದ ಪ್ಯಾಕೇಜಿಂಗ್ ಹಾಗೂ ಗಿಫ್ಟ್ ಹ್ಯಾಂಪರ್‌ಗಳನ್ನು ನೀಡುವ ಮೂಲಕ ಉಡುಗೊರೆಗಳಿಗೆ ವಿಶೇಷವಾಗಿಸಬಹುದು.
ಈ ಉಡುಗೊರೆಗಳನ್ನು ನೀಡುವ ಮೂಲಕ ನೀವು ನಿಮ್ಮ ನೆಚ್ಚಿನವರೊಂದಿಗೆ ಹಬ್ಬ ಆಚರಿಸಿ, ಸಂಭ್ರಮ ದ್ವಿಗುಣಗೊಳಿಸಿ.